ನವದೆಹಲಿ: ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ(ಎನ್‌ಸಿಪಿಸಿಆರ್) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.
ಪಾದಯಾತ್ರೆ ವೇಳೆ ಶಾಲಾ ಮಕ್ಕಳನ್ನು ಶಿವಕುಮಾರ್ ಭೇಟಿಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದೆ.
Advertisement
Advertisement
ಪತ್ರದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಶಿವಕುಮಾರ್ ವಿರುದ್ಧ ಕ್ರಮ ಕೈಗೊಂಡು 7 ದಿನಗಳ ಒಳಗಡೆ ವರದಿ ನೀಡುವಂತೆ ಸೂಚಿಸಿದೆ. ಪತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಇರುವ ವಿಡಿಯೋದ ಟ್ವಿಟ್ಟರ್ ಲಿಂಕ್ ಅನ್ನು ಉಲ್ಲೇಖಿಸಿದೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಯೋಗ ಸೂಚಿಸಿದೆ. ಇದನ್ನೂ ಓದಿ: ಕೊರೊನಾ ಟೆಸ್ಟ್ ಮಾಡಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ಮಾಡ್ತಿದೆ ಬಿಜೆಪಿ: ಡಿಕೆಶಿ
Advertisement
ನಿಮಗೆ ಕೇಳಿಸುತ್ತಿದೆಯಾ?
ಭವಿಷ್ಯದ ಕರ್ನಾಟಕದ ಕೂಗು ಮಾರ್ದನಿಸುತ್ತಿದೆ.
ಇದು ಹಕ್ಕಿನ ಹೋರಾಟ, ಗೆಲ್ಲುವುದು ದಿಟ
Do you hear this?
This the future of Karnataka speaking!
We will fight for our rights and win. #Mekedatu#NammaNeeruNammaHakku pic.twitter.com/j6PhExmahc
— DK Shivakumar (@DKShivakumar) January 10, 2022
Advertisement
ಶಿವಕುಮಾರ್ ಅವರು ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ ಮಕ್ಕಳ ಗುಂಪಿನ ನಡುವೆ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಧರಿಸದೇ ಫೋಟೊ ತೆಗೆಸಿಕೊಂಡಿದ್ದು ಟೀಕೆಗೆ ಗುರಿಯಾಗಿತ್ತು. ಇದನ್ನೂ ಓದಿ: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಿದ್ದಾರೆ: ಡಿ.ಕೆ ಸುರೇಶ್