ಬೆಂಗಳೂರು: ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬದ ನಂತರ ಮೊದಲ ಬಾರಿಗೆ ಮೇಘನಾ ರಾಜ್ ಮಗನ ಜೊತೆಗಿರುವ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ರಾಯನ್ ಹುಟ್ಟುಹಬ್ಬಕ್ಕೆ ಮನೆಯ ಪೂರ್ತಿ ಕಾಡಿನ ಥೀಮ್ನಂತೆ ಅಲಂಕರಿಸಿ ಸಖತ್ ಗ್ರ್ಯಾಂಡ್ ಆಗಿ ಮೇಘನಾ ಹಾಗೂ ಚಿರು ಕುಟುಂಬದವರು ಬರ್ತ್ಡೇ ಸೆಲೆಬ್ರೆಟ್ ಮಾಡಿದ್ದರು. ಇನ್ನೂ ರಾಯನ್ ಬರ್ತ್ಡೇಗೆ ಸ್ಯಾಂಡಲ್ವುಡ್ ಹಲವಾರು ಗಣ್ಯಾತಿ ಗಣ್ಯರು ಆಗಮಿಸಿ ರಾಯನ್ಗೆ ಗಿಫ್ಟ್ ನೀಡಿ ಬರ್ತ್ಡೇಗೆ ವಿಶ್ ಮಾಡಿದ್ದರು. ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ನಟ ರಜನಿಕಾಂತ್
ಬರ್ತ್ಡೇ ಮುಗಿದ ನಂತರ ಇದೀಗ ಅಮ್ಮ ಮಗ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋವನ್ನು ಮೇಘನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೇಘನಾ ಹಾಗೂ ರಾಯನ್ ರಾಜ್ ಇಬ್ಬರು ಮಲಗಿಕೊಂಡಿದ್ದು, ರಾಯನ್ ಅಮ್ಮನ ಜುಟ್ಟನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದರೆ, ಮೇಘನಾ ಮಗನ ಚೇಷ್ಟೆಯನ್ನು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗಲು ಬಿಡುವುದಿಲ್ಲ: ಶ್ರೀಮಂತ ಪಾಟೀಲ್
ಒಟ್ಟಾರೆ ಬರ್ತ್ಡೇಯಲ್ಲಿ ಮಿಂಚಿದ್ದ ಮೇಘನಾ ಹಾಗೂ ರಾಯನ್ ಇದೀಗ ಬ್ಲ್ಯಾಕ್ ಆ್ಯಂಡ್ ಫೋಟೋದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.