ಪತಿ ಚಿರಂಜೀವಿ ಸರ್ಜಾ(Chiranjeevi Sarja) ನಿಧನದ ನೋವಿನಲ್ಲಿದ್ದ ಮೇಘನಾ ರಾಜ್(Meghana Raj) ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ. ಜ್ಯೂನಿಯರ್ ಚಿರು ಪೋಷಣೆಯಲ್ಲಿ ಬ್ಯುಸಿಯಿದ್ದ ನಟಿ ಸ್ನೇಹಿತರ ಬೆಂಬಲದ ಮೇರೆಗೆ ಮತ್ತೆ ನಟನೆಯತ್ತ ವಾಲಿದ್ದಾರೆ. ಮೇಘನಾ ರಾಜ್ ನಟಿಸುವ ಹೊಸ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರೆ.
`ರಾಜಹುಲಿ’ ನಟಿ ಮೇಘನಾ ರಾಜ್ (Meghana Raj) ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪತಿ ಚಿರಂಜೀವ ಸರ್ಜಾ ಅಗಲಿಕೆಯ ನಂತರ ಪುತ್ರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ, ಸ್ನೇಹಿತರ ಒತ್ತಾಯ ಮತ್ತು ಬೆಂಬಲದ ಮೇರೆಗೆ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ನಿರ್ದೇಶಕ ಪನ್ನಗಭರಣ ಡೈರೆಕ್ಷನ್‌ನಲ್ಲಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಸ್ನೇಹಿತ ಪನ್ನಗ ಕೂಡ ಮೇಘನಾಗೆ ಹೋಲುವ ಕಥೆಯನ್ನೇ ರೆಡಿ ಮಾಡಿದ್ದಾರೆ. ಇದೀಗ ಈ ಇಬ್ಬರ ಕಾಂಬಿನೇಷನ್‌ನ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಕೂಡ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಕಾವ್ಯಶ್ರೀ ರೂಪೇಶ್‌ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?
ನಟ ಪ್ರಜ್ವಲ್ ದೇವರಾಜ್ ಖಡಕ್ ಆಫೀಸರ್ ಆಗಿ ಮೇಘನಾ ಮತ್ತು ಪನ್ನಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ರಂಜಿಸಲು ಪ್ರಜ್ವಲ್ ಸಜ್ಜಾಗಿದ್ದಾರೆ.
ಅಂದ್ಹಾಗೆ ಮೇಘನಾ ರಾಜ್ ನಟನೆಯ ಈ ಚಿತ್ರದ ಟೈಟಲ್ ಅನ್ನ ಚಿರು ಹುಟ್ಟುಹಬ್ಬದಂದು ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ.