ವಿಧಾನಸಭೆಯ ಮೇಲೆ ಹೊಸದಾಗಿ ನಿರ್ಮಿಸಿದ್ದ 70 ಟನ್ ತೂಕದ ಉಕ್ಕಿನ ಗುಮ್ಮಟ ಕುಸಿತ

Advertisements

ಶಿಲ್ಲಾಂಗ್: ಹೊಸದಾಗಿ ನಿರ್ಮಿಸಲಾಗಿದ್ದ ಮೇಘಾಲಯ ವಿಧಾನಸಭೆಯ ಕಟ್ಟಡದ ಒಂದು ಭಾಗ ಭಾನುವಾರ ಕುಸಿದಿದೆ. ಸದ್ಯ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Advertisements

ಸುಮಾರು 177.7 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾದ ಸುಮಾರು 70 ಟನ್ ತೂಕದ ಗುಮ್ಮಟ ಮಧ್ಯರಾತ್ರಿ ಸುಮಾರು 12:20 ರ ವೇಳೆಗೆ ಕುಸಿದಿದೆ.

ಮೇಘಾಲಯದ ವಿಧಾನಸಭೆಯ ನೂತನ ಕಟ್ಟಡವನ್ನು ಉತ್ತರ ಪ್ರದೇಶ ಮೂಲದ ಕಂಪನಿ ನಿರ್ಮಿಸಿದ್ದು, ಕುಸಿತ ವಿನ್ಯಾಸದ ದೋಷದಿಂದ ಸಂಭವಿಸಿರಬಹುದು ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ

Advertisements

ಮುಂಜಾನೆ ಸ್ಥಳಕ್ಕೆ ಧಾವಿಸಿದ ಎಂಜಿನಿಯರ್‌ಗಳು ಹೊಸ ಗುಮ್ಮಟವನ್ನು ನಿರ್ಮಿಸಲು ಕನಿಷ್ಟ 8 ತಿಂಗಳು ಬೇಕು ಎಂದು ತಿಳಿಸಿದ್ದಾರೆ. ಇದೀಗ ಕುಸಿತವಾಗಿರುವ ಅವಶೇಷಗಳನ್ನು ತೆರವುಗೊಳಿಸಲು ಇನ್ನೂ 2 ವಾರ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ: ಝೆಲೆನ್ಸ್ಕಿ

ಹೊಸ ಕಟ್ಟಡದ ಕಾಮಗಾರಿಯನ್ನು 2019ರ ಜೂನ್‌ನಲ್ಲಿ ಪ್ರಾರಂಭಿಸಲಾಗಿತ್ತು. ಇದೇ ವರ್ಷ ಆಗಸ್ಟ್ ತಿಂಗಳ ಒಳಗಾಗಿ ಕಾಮಗಾರಿ ಕೆಲಸ ಪೂರ್ಣಗೊಳ್ಳಬೇಕಿತ್ತು.

Advertisements

Advertisements
Exit mobile version