InternationalLatestMain Post

ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ

ಇಸ್ಲಾಮಾಬಾದ್: ಕೇಂದ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಹಿನ್ನೆಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದಾರೆ.

ರಷ್ಯಾದ ತೈಲವನ್ನು ಭಾರತ ರಿಯಾಯಿತಿ ದರದಲ್ಲಿ ಖರೀದಿಸಿದೆ. ಅಮೆರಿಕದ ಒತ್ತಡದ ನಡುವೆಯೂ ಜನಸಾಮಾನ್ಯರಿಗೆ ಪರಿಹಾರ ನೀಡಲು ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದಕ್ಕೆ 4 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ವೇದಿಕೆ

ಭಾರತ ಕ್ವಾಡ್ ರಾಷ್ಟ್ರಗಳಲ್ಲಿ(ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಭಾರತ) ಒಂದಾಗಿದ್ದರೂ ಅಮೆರಿಕದ ಒತ್ತಡವನ್ನು ಎದುರಿಸಿ, ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿತು. ಪಾಕಿಸ್ತಾನದಲ್ಲಿ ನಮ್ಮ ಸರ್ಕಾರವಿದ್ದಾಗ ನಾವು ಕೂಡಾ ಸ್ವತಂತ್ರ್ಯ ವಿದೇಶಾಂಗ ನೀತಿಯ ಸಹಾಯದಿಂದ ಇದೇ ರೀತಿಯಾಗಿ ಕೆಲಸ ಮಾಡುತ್ತಿದ್ದೆವು ಎಂದು ಖಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಇದೀಗ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರ ಆರ್ಥಿಕತೆಯಲ್ಲಿ ತಲೆಯಿಲ್ಲದ ಕೋಳಿಯಂತೆ ಓಡಾಡುತ್ತಿದೆ. ಪಾಕಿಸ್ತಾನದ ಆಡಳಿತ ಬದಲಾವಣೆಯಾಗುವಂತೆ ಬಾಹ್ಯ ದೇಶಗಳ ಒತ್ತಡಕ್ಕೆ ಮಣಿಯುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

ಶನಿವಾರ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‌ಗೆ 9.50 ರೂ. ಹಾಗೂ ಪ್ರತೀ ಲೀಟರ್ ಡೀಸೆಲ್‌ಗೆ 6 ರೂ. ಕಡಿತಗೊಳಿಸಿದೆ.

Leave a Reply

Your email address will not be published.

Back to top button