ಬಾಲಿವುಡ್‌ನ ನಿರೀಕ್ಷಿತ ಸಿನಿಮಾ `ಬ್ರಹ್ಮಾಸ್ತ್ರ’ ಸಾಕಷ್ಟು ವಿಚಾರಗಳಿಂದ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಇದೀಗ ಚಿತ್ರದ ಕುರಿತು ಹೊಸ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಬ್ರಹ್ಮಾಸ್ತ್ರ ಚಿತ್ರದ ಕುರಿತು ಬಿಗ್ ನ್ಯೂಸ್‌ವೊಂದನ್ನು ರಿವೀಲ್ ಮಾಡಿದ್ದಾರೆ. ಟಾಲಿವುಡ್‌ನ ಮೆಗಾಸ್ಟಾರ್ `ಬ್ರಹ್ಮಾಸ್ತ್ರ’ ಚಿತ್ರದ ಭಾಗಿವಾಗಿದ್ದು, ಇದೀಗ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
Advertisement
ಆಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ಜೂನ್ 15ಕ್ಕೆ ಚಿತ್ರತಂಡ ರಿಲೀಸ್ ಮಾಡಲಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕೆ ಸಾಥ್ ನೀಡಿರುವ ವಿಚಾರವನ್ನ ಟ್ವೀಟ್ ಮೂಲಕ ರಾಜಮೌಳಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್
Advertisement
Happy to announce that @KChiruTweets garu has lent his voice to Brahmāstra Trailer.
Telugu Trailer of Brahmāstra will release on June 15th!https://t.co/Rl70nZkaMR
— rajamouli ss (@ssrajamouli) June 13, 2022
Advertisement
ಸೌತ್ ಸೂಪರ್ ಸ್ಟಾರ್ ಚಿರಂಜೀವಿ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಟ್ರೇಲರ್‌ಗಾಗಿ ತೆಲುಗಿನಲ್ಲಿ ತಮ್ಮ ವಾಯ್ಸ್ ನೀಡಿದ್ದಾರೆ. `ಬ್ರಹ್ಮಾಸ್ತ್ರ’ಕ್ಕೆ ತಮ್ಮ ಖಡಕ್ ವಾಯ್ಸ್ ಮೂಲಕ ಮೋಡಿ ಮಾಡಿದ್ದಾರೆ. ಜೂನ್ 15ಕ್ಕೆ ರಿಲೀಸ್ ಆಗಲಿರುವ ಟ್ರೇಲರ್‌ನಲ್ಲಿ ನೋಡಬಹುದಾಗಿದೆ. ಚಿತ್ರತಂಡವನ್ನ ಭೇಟಿಯಾಗಿ, ಟ್ರೇಲರ್‌ಗೆ ವಾಯ್ಸ್ ನೀಡಿರುವುದಲ್ಲದೇ ಸೂಪರ್ ಸ್ಟಾರ್ಸ್ ನಟಿಸಿರುವ ಈ ಚಿತ್ರಕ್ಕೆ ಚಿರಂಜೀವಿ ಶುಭ ಹಾರೈಸಿ ಬಂದಿದ್ದಾರೆ. ಒಟ್ನಲ್ಲಿ ಸೂಪರ್ ಗುಡ್ ನ್ಯೂಸ್ ಕೇಳಿರುವ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.