ಬೆಂಗಳೂರು: ಸಿಲಿಕಾನ್ ಸಿಟಿ ಈಗ ಡ್ರಗ್ಸ್ (Drugs) ಹಬ್ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗ್ತಿದೆ. ನಗರದ ವಿವಿಧ ಭಾಗಗಳಲ್ಲಿ ಕಳೆದ 15 ದಿನಗಳಲ್ಲಿ 65 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ (Drugs Seize) ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಪೊಲೀಸರು (Bengaluru City Police) ಎಷ್ಟೇ ಅಲರ್ಟ್ ಆದರೂ, ನಗರದಲ್ಲಿ ಡ್ರಗ್ಸ್ ಸಪ್ಲೈ ಕಡಿಮೆಯಾಗ್ತಿಲ್ಲ. ಇಷ್ಟು ದೊಡ್ಡಪ್ರಮಾಣದ ಡ್ರಗ್ಸ್ ನಗರಕ್ಕೆ ಸಪ್ಲೈ ಆಗ್ತಿರೋದು ಎಲ್ಲಿಂದ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಷ್ಟೇ ರೇಡ್ ಮಾಡಿದ್ರು, ಕೋಟಿ ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಆದ್ರೂ, ಡ್ರಗ್ ಸಪ್ಲೈ ಕಡಿಮೆಯಾಗ್ತಿಲ್ಲ. ಡ್ರಗ್ಸ್ ಜಾಲದ ಹಿನ್ನೆಲೆ ಹಾಗೂ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ದೇಶದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಆಗ್ತಿರೋದು ಪತ್ತೆಯಾಗ್ತಿದೆ.
ದೆಹಲಿಯಿಂದ ಎಂಡಿಎಂಎ, ಆಂಧ್ರದ ವಿಶಾಖಪಟ್ಟಣ, ಅರಕು ಕಣಿವೆಯಿಂದ ಗಾಂಜಾ ಹೆಚ್ಚು ಬರುತ್ತಿದೆ ಎಂಬ ಅಂಶ ಬಹಿರಂಗಗೊಂಡಿದೆ. ಆದ್ರೆ ಬೆಂಗಳೂರು ಪೊಲೀಸರು ಕೂಡ ಡ್ರಗ್ ಸಾಗಾಟ ತಡೆಯಲು ಅಷ್ಟೇ ಆಕ್ವೀವ್ ಆಗಿ ಕೆಲಸ ಮಾಡ್ತಾ ಇದ್ದಾರೆ.

