ಲಕ್ನೊ: ಪ್ರಧಾನಿ ಮೋದಿ ಓಬಿಸಿ ಕುಟುಂಬದಲ್ಲಿ ಜನಿಸಿದ್ದರೆ, ಅವರನ್ನು ಆರ್‌ಎಸ್‌ಎಸ್ ಪ್ರಧಾನಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಯಾವತಿ ಟ್ವೀಟ್ ಮಾಡಿದ್ದಾರೆ.
ಪಿಎಂ ಮೋದಿ ಎಸ್‍ಪಿ ಮತ್ತು ಬಿಎಸ್‍ಪಿ ಮಹಾಮೈತ್ರಿಗೆ ಜಾತೀವಾದ ಹೆಸರನ್ನು ನೀಡುತ್ತಿದ್ದಾರೆ. ಇದೊಂದು ಹಾಸ್ಯಸ್ಪದ ಮತ್ತು ಅಪರಿಪಕ್ವತೆಯ ಹೇಳಿಕೆಯಾಗಿದೆ. ಜಾತೀವಾದ ಶಾಪದಿಂದ ಪೀಡಿತ ಜನರು ಇಂದು ಜಾತೀಯತೆ ಬಗ್ಗೆ ಹೇಗೆ ಮಾತನಾಡ್ತಾರೆ. ಮೋದಿ ಓಬಿಸಿಯಲ್ಲಿ ಹುಟ್ಟಿಲ್ಲ. ಮೇಲ್ವರ್ಗದ ಶೋಷಣೆಗಳಿಗೆ ಪ್ರಧಾನಿಗಳು ಒಳಗಾಗಿಲ್ಲ. ಹಾಗಾಗಿ ಈ ರೀತಿಯ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Advertisement
पीएम श्री मोदी ने अब और कुछ नहीं तो गठबंधन पर जातिवादी होने का जो आरोप लगाया है वह हास्यास्पद व अपरिपक्व है। जातिवाद के अभिशाप से पीड़ित लोग जातिवादी कैसे हो सकते हैं? श्री मोदी जन्म से ओबीसी नहीं हैं इसीलिए उन्होंने जातिवाद का दंश नहीं झेला है और ऐसी मिथ्या बातें करते हैं।
— Mayawati (@Mayawati) May 10, 2019
Advertisement
ಪ್ರಧಾನಿ ಮೋದಿ ರಾಜಕೀಯ ಲಾಭಕ್ಕಾಗಿ ತಾವು ಹಿಂದುಳಿದ ವರ್ಗದ ವ್ಯಕ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಮೋದಿ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದ್ದರೆ, ಆರ್ ಎಸ್‍ಎಸ್ ಎಂದೂ ಅವರನ್ನು ಪಿಎಂ ಮಾಡುತ್ತಿರಲಿಲ್ಲ. ಕಲ್ಯಾಣ್ ಸಿಂಗ್ ಅಂತಹ ನಾಯಕರಿಗೆ ಆರ್‍ಎಸ್‍ಎಸ್ ಏನು ಮಾಡಿದೆ ಎಂಬುದನ್ನು ದೇಶದ ಜನರೇ ನೋಡಿದ್ದಾರೆ ಎಂದು ಟ್ವೀಟ್ ಮೂಲಕ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
Advertisement
इसके विपरीत, श्री मोदी अपने को जबर्दस्ती पिछड़ा बनाकर जातिवाद का खुलकर राजनीतिक स्वार्थ के लिए इस्तेमाल करते हैं। वे अगर जन्म से पिछड़े होते तो क्या आरएसएस उन्हें कभी भी पीएम बनने देती? वैसे भी श्री कल्याण सिंह जैसों का आरएसएस ने क्या बुरा हाल किया है यह देश क्या नही देख रहा है।
— Mayawati (@Mayawati) May 10, 2019
Advertisement