ಸ್ಯಾಂಡಲ್‌ವುಡ್ (Sandalwood) ಸ್ಟಾರ್ಸ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ಸಿಸಿಎಲ್ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಫೆ.8ರಿಂದ ಸಿಸಿಎಲ್ 11ನೇ ಸೀಸನ್ ಶುರುವಾಗುತ್ತಿದೆ. ಹಾಗಾಗಿ ಈ ಕಾರ್ಯಕ್ರಮ ಉದ್ಘಾಟಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ (D.K. Shivakumar) ಸುದೀಪ್ (Sudeep) ಆಹ್ವಾನ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಇದೇ ಫೆ.8ರಿಂದ ಸಿಸಿಎಲ್ ಆರಂಭ ಆಗಲಿದೆ. ಇದರ ಉದ್ಘಾಟನೆಗೆ ಡಿಕೆಶಿ ಅವರಿಗೆ ಸುದೀಪ್ ಆಹ್ವಾನ ನೀಡಿದ್ದಾರೆ. ಹೀಗಾಗಿ, ಅವರು ಡಿಕೆಶಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸುದೀಪ್‌ಗೆ ಡೈರೆಕ್ಟರ್ ಅನೂಪ್ ಭಂಡಾರಿ ಸಾಥ್ ನೀಡಿದ್ದಾರೆ. ಫೆ.8ರಂದು ಕರ್ನಾಟಕ ಬುಲ್ಡೋಜರ್ ತಂಡದವರು ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
Advertisement
Advertisement
ಅಂದಹಾಗೆ, ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಮಾತನಾಡಿ, ಸಿಸಿಎಲ್ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ ಒಟ್ಟಿಗೆ ಶುರುವಾದ ಜರ್ನಿ ಇದು. ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಮುಂಬೈ ಮೇಲೆ ಮೊದಲ ಮ್ಯಾಚ್ ಆಡಿದ್ದೇವು. ಅದ್ಭುತ ವಾತಾವರಣ ಆ ದಿನ ಇತ್ತು. ನಾವೆಲ್ಲಾ ಚಿಕ್ಕ ಚಿಕ್ಕ ಗ್ರೌಂಡ್‌ನಲ್ಲಿ ಆಟವಾಡುತ್ತಿದ್ದರು. ಅವತ್ತಿಗೆ ಗ್ರೌಂಡ್ ಫುಲ್ ಆಗುತ್ತದೆ. ಇಷ್ಟು ಜನಗಳ ಮಧ್ಯೆ ಆಡುವುದು. ಭಯ ಎಂದರೇನು ಅನ್ನುವುದು ಅವತ್ತು ಗೊತ್ತಾಯ್ತು. ನಮಗೆ ಅದು ಕೊಟ್ಟ ಅದ್ಭುತ ಗಿಫ್ಟ್. ಚಿತ್ರರಂಗದ ಬೇರೆ ಬೇರೆ ಭಾಷೆಗಳ ಜೊತೆ ನಮಗೆ ಒಡನಾಟ ಇರಲಿಲ್ಲ. ಸೇತುವೆ ಇರಲಿಲ್ಲ. ಆದರೆ ಸಿಸಿಎಲ್‌ನಿಂದ ಸಂಪರ್ಕವಾಯಿತು ಎಂದು ಮಾತನಾಡಿದ್ದರು.
Advertisement
ಈ ಬಾರಿ ಒಟ್ಟು 7 ತಂಡಗಳು ಕ್ರಿಕೆಟ್ ಆಡಲಿದೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.