ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

Public TV
2 Min Read
Law

ಮುಂಬೈ: ಒಬ್ಬ ವ್ಯಕ್ತಿ ಮತ್ತೊಬ್ಬರ ಎದುರು ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ ಎಂದು ಮುಂಬೈನ ವಿಶೇಷ ನ್ಯಾಯಾಲಯ ಹೇಳಿದ್ದು, ಈ ಸಂಬಂಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದೆ.

ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಪ್ರಿಯಾ ಬಣಕಾರ್ ಅವರು, ಆಗಸ್ಟ್ 29 ರಂದು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದರು. ಗುರುವಾರ ಈ ತೀರ್ಪು ನೀಡಿದ್ದಾರೆ.

crim

 

ನಾಲ್ಕು ವರ್ಷದ ಬಾಲಕ ತನ್ನ ಮನೆಯ ಸಮೀಪವಿರುವ ಆರೋಪಿಯ ಟೈಲರಿಂಗ್ ಅಂಗಡಿಗೆ ಹೋದಾಗ, ಆರೋಪಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸುತ್ತಿರುವುದನ್ನು ನೋಡಿದನು ಎಂಬುದು ಪ್ರಕರಣವಾಗಿದೆ. ಇದನ್ನೂ ಓದಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ದೂರಿನ ಪ್ರಕಾರ ಆರೋಪಿ ತನ್ನ ಖಾಸಗಿ ಅಂಗವನ್ನು ಬಾಲಕನಿಗೆ ತೋರಿಸಿದ್ದಾನೆ. ಆದರೆ ಬಾಲಕನನ್ನು ಅಂಗಡಿಗೆ ಕರೆದಿಲ್ಲ, ಬಾಲಕನ ಬಳಿಯೂ ಹೋಗಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಈ ಕೃತ್ಯವನ್ನು ಬಾಲಕ ಆಕಸ್ಮಿಕವಾಗಿ ನೋಡಿದ್ದು ನಿಜ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

court order law

 

ಆರೋಪಿಯ ಅಂಗಡಿ ಚಿಕ್ಕದಾಗಿದ್ದು, ದಾರಿಹೋಕರು ಈತನ ಕೃತ್ಯವನ್ನು ನೋಡಿರಬಹುದು. ಹೀಗಾಗಿ ಆತ ಮರೆಮಾಚಿ ಹಸ್ತಮೈಥುನ ಮಾಡುತ್ತಿದ್ದ ಎಂದು ಹೇಳಲಾಗದು. ಬಾಲಕ ಈತನ ಕೃತ್ಯವನ್ನು ನೋಡಿದಾಗ, ಅದನ್ನು ಮರೆಮಾಚದೇ ಏನನ್ನೋ ವಿವರಿಸಲು ಹೇಳಲು ಯತ್ನಿಸಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ.

ಹಸ್ತಮೈಥುನ ಒಂದು ಲೈಂಗಿಕ ಕ್ರಿಯೆಯಾಗಿದೆ. ಒಬ್ಬ ವ್ಯಕ್ತಿ ಮತ್ತೋರ್ವ ವ್ಯಕ್ತಿಯ ಎದುರು ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ವ್ಯಕ್ತಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

ಬಾಲಕನ ಮೇಲೆ, ಆತನ ಕುಟುಂಬಸ್ಥರ ಮೇಲೆ ಮತ್ತು ಸಮಾಜದ ಮೇಲೂ ಇಂತಹ ಘಟನೆಗಳು ಪರಿಣಾಮಕಾರಿಯಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮಕ್ಕಳು ಸುರಕ್ಷಿತರಾಗಿರುವುದಿಲ್ಲ ಮತ್ತು ಸಮಾಜದಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಖಂಡಿತವಾಗಿಯೂ, ಇಂತಹ ಘಟನೆಯು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ. ಸಂತ್ರಸ್ತರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಹಾಗೆಯೇ ಉಳಿದುಬಿಡುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *