LatestMain PostNational

ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

ಚಂಡೀಗಢ: ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲೆ ಪುರುಷರ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಅವರ ಮೇಲೆ ಪತಿ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪಂಜಾಬ್ ನಿವಾಸದಲ್ಲಿ ಬಲ್ಜಿಂದರ್ ಕೌರ್ ಮೇಲೆ ಶಾಸಕರಾಗಿರುವ ಪತಿ ಹಲ್ಲೆ ನಡೆಸಿರುವುದನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ವೀಡಿಯೋ ಹಲವು ಟೀಕೆಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

ಪಂಜಾಬ್‍ನ ತಲ್ವಾಂಡಿ ಸಾಬೋ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿರುವ ಸುಖರಾಜ್ ಸಿಂಗ್ ಅವರೊಂದಿಗೆ ಪತ್ನಿ ಬಲ್ಜಿಂದರ್ ಕೌರ್ ವಾದ ಮಾಡುತ್ತಿರುತ್ತಾರೆ. ಈ ವೇಳೆ ಆಕ್ರೋಶಗೊಂಡ ಸುಖರಾಜ್ ಪತ್ನಿಗೆ ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೇಳೆ ಕೆಲವರು ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ತಳ್ಳಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಅವರು, ನಾನು ಗಲಾಟೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂ ಪ್ರೇರಿತ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮಹಿಳೆಯೇ ಮನೆಯಲ್ಲಿ ಕಿರುಕುಳ ಎದುರಿಸುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button