ಮುಂಬೈ: ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್ ಕಾರ್ಡ್ ಟೀಂ ಇಂಡಿಯಾದ ಶೀರ್ಷಿಕೆ ಪ್ರಾಯೋಜಕತ್ವ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.
Advertisement
ಶೀರ್ಷಿಕೆ ಪ್ರಯೋಜಕವಾಗಿದ್ದ ಪೇಟಿಎಂನ 7 ವರ್ಷಗಳ ಒಪ್ಪಂದ ಕೊನೆಗೊಂಡಿದೆ. ಇದೀಗ ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‍ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಬಿಸಿಸಿಐ ಆಯೋಜಿಸುವ ಮಹಿಳಾ ಮತ್ತು ಪುರುಷ ತಂಡಗಳ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ರಣಜಿ ಟ್ರೋಫಿಯಂತಹ ದೇಸಿಯ ಕ್ರಿಕೆಟ್ ಪಂದ್ಯಗಳು ಮತ್ತು ಭಾರತದಲ್ಲಿ ನಡೆಯುವ ಎಲ್ಲಾ ಜೂನಿಯರ್ ಕ್ರಿಕೆಟ್ (19 ವರ್ಷದೊಳಗಿನ ಮತ್ತು 23 ವರ್ಷದೊಳಗಿನ) ಪಂದ್ಯಗಳಿಗೂ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕ ಮಾಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಅರ್ಶ್‌ದೀಪ್ ಪೇಜ್ ಎಡಿಟ್ – ವಿಕಿಪೀಡಿಯಾಗೆ ಸಮನ್ಸ್ ಜಾರಿ ಮಾಡಿದ ಕೇಂದ್ರ
Advertisement
Advertisement
7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. 2023ರ ವರೆಗೆ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಇರಲಿದೆ. 2019ರ ಆಗಸ್ಟ್‍ನಲ್ಲಿ ಬಿಸಿಸಿಐ ಜೊತೆಗೆ ಪೇಟಿಎಂ ಶೀರ್ಷಿಕೆ ಪ್ರಯೋಜಕತ್ವದ ಹಕ್ಕನ್ನು ಮುಂದಿನ 4 ವರ್ಷಕ್ಕೆ ನವೀಕರಣಗೊಳಿಸಿತ್ತು. ಮುಂದಿನ ನಾಲ್ಕು ವರ್ಷದ ಪ್ರಯೋಜಕತ್ವದ ಹಕ್ಕನ್ನು 3.80 ಕೋಟಿ ರೂ.ಗೆ ಪೇಟಿಎಂ ತನ್ನದಾಗಿಸಿಕೊಂಡಿತ್ತು. ಪೇಟಿಎಂ 2015 ರಿಂದ 2019ರ ವರಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐನಿಂದ 2.4 ಕೋಟಿ ರೂ. ನೀಡಿ ಖರೀದಿತ್ತು. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಮಾಸ್ಟರ್ ಕಾರ್ಡ್ ಪ್ರಯೋಜಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಇದನ್ನೂ ಓದಿ: ನೋವಿನಲ್ಲೂ ಆಡಿ ಪಾಕ್ ಗೆಲ್ಲಿಸಿದ ರಿಜ್ವಾನ್ – ಪಂದ್ಯದ ಬಳಿಕ MRI ಸ್ಕ್ಯಾನ್
Advertisement
ನಾಲ್ಕು ವರ್ಷಗಳಿಂದ ಮಾಸ್ಟರ್ ಕಾರ್ಡ್‌ನ ರಾಯಭಾರಿಯಾಗಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು