CricketLatestLeading NewsMain PostSports

ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

ದುಬೈ: ಟೀಂ ಇಂಡಿಯಾದ ರನ್ ಮಿಷಿನ್ ವಿರಾಟ್ ಕೊಹ್ಲಿ ಏಷ್ಯಾಕಪ್‍ನಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 60 ರನ್ (40 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಟೀಂ ಇಂಡಿಯಾದ ಬೃಹತ್ ಗುರಿಗೆ ಸಹಕಾರಿಯಾದರು. ಇದು ಏಷ್ಯಾಕಪ್‍ನಲ್ಲಿ ಕೊಹ್ಲಿ ಸಿಡಿಸಿದ ಎರಡನೇ ಅರ್ಧಶತಕವಾಗಿದೆ. ಕಳೆದ ಹಾಂಕಾಂಗ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೊಹ್ಲಿ ಅಜೇಯ 59 ರನ್ (44 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ 35 ರನ್ (34 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿದ್ದರು. ಈ ಮೂಲಕ 2022ರ ಏಷ್ಯಾಕಪ್‍ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

ಕೊಹ್ಲಿ 3 ಪಂದ್ಯಗಳಲ್ಲಿ ಒಟ್ಟು 154 ರನ್ ಸಿಡಿಸಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಸೈಲೆಂಟ್ ಆಗಿದ್ದ ಕೊಹ್ಲಿ ಬ್ಯಾಟ್ ಏಷ್ಯಾಕಪ್‍ನಲ್ಲಿ ಸದ್ದು ಮಾಡುತ್ತಿದೆ. ಇದನ್ನು ಗಮನಿಸಿದ ಕೊಹ್ಲಿ ಅಭಿಮಾನಿಗಳು THE KING IS BACK ಎಂದು ಸಂತೋಷ ಪಡುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

Live Tv

Leave a Reply

Your email address will not be published.

Back to top button