ಮಂಡ್ಯ: ದಿನೇ ದಿನೇ ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ದು, ಮಂಡ್ಯದಲ್ಲಿ (Mandya) ಅನ್ನದಾತರು ಹಾಗೂ ರೈತ ಸಂಘಟನೆಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇಂದು ಕಾವೇರಿ ಹೋರಾಟದ ಕಿಚ್ಚನ್ನು ಹೆಚ್ಚಿಸುವ ಸಲುವಾಗಿ ಜೆಡಿಎಸ್ (JDS) ದಳಪತಿಗಳು ಅಖಾಡಕ್ಕಿಳಿಯಲಿದ್ದಾರೆ.
ತಮಿಳುನಾಡಿಗೆ (Tamil Nadu) ನೀರು ಹರಿಸುತ್ತಿರುವುದನ್ನು ಖಂಡಿಸಿ ಶನಿವಾರ ಮಂಡ್ಯದಲ್ಲಿ ದಳ ಪಡೆಯಿಂದ ಬೃಹತ್ ಪ್ರತಿಭಟನೆ (Protest) ನಡೆಯಲಿದೆ. ಮಂಡ್ಯ ಜೆಡಿಎಸ್ ನಾಯಕರು ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಡೆಡ್‌ಲೈನ್ ನೀಡಿದ್ದು, ಕೆಆರ್‌ಎಸ್ (KRS) ಡ್ಯಾಂನಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದರು. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆಯಂತೆ ನಾಲ್ಕು ದಿನಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರದ ನಡೆ ಹಾಗೂ ಪ್ರಾಧಿಕಾರದ ಆದೇಶ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಇದನ್ನೂ ಓದಿ: ಸೂರ್ಯ ಶಿಕಾರಿಗೆ ಕೌಂಟ್‍ಡೌನ್- ಬೆಳಗ್ಗೆ 11:50ಕ್ಕೆ ಆದಿತ್ಯ ಎಲ್1 ಉಡಾವಣೆ
Advertisement
Advertisement
ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಕಾವೇರಿ ಹೋರಾಟ ನಡೆಸಲಿದೆ. ಸಿಲ್ವರ್ ಜುಬಿಲಿ ಪಾರ್ಕ್‌ನಿಂದ ಮಂಡ್ಯ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಕಾವೇರಿ ಹೋರಾಟದಲ್ಲಿ ಹಾಲಿ, ಮಾಜಿ ಜೆಡಿಎಸ್ ಶಾಸಕರು, ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಂಡ್ಯ ನಾಯಕರು ಮಾಜಿ ಪ್ರಧಾನಿ ದೇವೇಗೌಡರನ್ನು ಕರೆತರಲು ಯತ್ನಿಸುತ್ತಿದ್ದು, ಪ್ರತಿಭಟನೆಯಲ್ಲಿ ದೇವೇಗೌಡರು (H.D.Deve Gowda) ಭಾಗವಹಿಸುವುದು ಅನುಮಾನ ಎನ್ನುವ ಮಾಹಿತಿ ಲಭಿಸಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ- ಶೀಘ್ರವೇ ಡಿಸ್ಚಾರ್ಜ್
Advertisement
Web Stories