ಬೀದರ್: ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಬಿ.ಇಡಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದ ಅಕ್ರಮದ ವೀಡಿಯೋ ಒಂದು ತಡವಾಗಿ ಬೆಳಕಿಗೆ ಬಂದಿದೆ.
Advertisement
ಡಿಸೆಂಬರ್ 27 ರಿಂದ ಜನವರಿ 5 ರವರೆಗೆ ನಡೆದಿದ್ದ ಬಿಇಡಿ ಪರೀಕ್ಷೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಯೊಂದರಲ್ಲಿ ಕಾಪಿ, ಬುಕ್, ಮೊಬೈಲ್ ಇಟ್ಟುಕೊಂಡು 7 ದಿನಗಳ ಕಾಲ ನಕಲು ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದರೊಂದಿಗೆ ಕಾಲೇಜಿನ ಕಾರ್ಯದರ್ಶಿ ದಿಲೀಪ್ ಕಮಠಾಣೆ ಮಾತನಾಡಿರುವ ವೀಡಿಯೋ ಕೂಡಾ ಬಹಿರಂಗವಾಗಿದೆ. ಇದನ್ನೂ ಓದಿ: ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್
Advertisement
Advertisement
ವಿಸಿ, ರಿಜಿಸ್ಟ್ರಾರ್‌ಗೆ ದುಡ್ಡು ನೀಡಬೇಕಾಗುತ್ತದೆ. ನಾವು ಎಲ್ಲಿಂದ ಹಣ ತರಬೇಕು, ಮಕ್ಕಳಿಂದ್ಲೇ ಹಣ ಸಂಗ್ರಹಿಸಿ ನೀಡಿದ್ದೀವಿ. ಹಣ ನೀಡಿದ ಮೇಲೆ ಅವರು ಕೇಂದ್ರ ನೀಡಿದ್ದಾರೆ ಎಂದು ಈ ವೀಡಿಯೋದಲ್ಲಿ ದಿಲೀಪ್ ಕಮಠಾಣೆಯ ಸಂಭಾಷಣೆ ಇದೆ. ಆದರೆ ಈ ಆರೋಪವನ್ನು ಕಲಬುರಗಿ ವಿವಿ ಕುಲಪತಿ ದಯಾನಂದ ಅಗಸರ್ ತಳ್ಳಿ ಹಾಕಿದ್ದಾರೆ. ಈ ಅಕ್ರಮ ನಮ್ಮ ಗಮನಕ್ಕೆ ಬಂದಿದ್ದು ಪರಿಶೀಲನೆ ಮಾಡಿದ್ದೇವೆ. ಆದಷ್ಟು ಬೇಗ ವರದಿ ತರಸಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು
Advertisement