ನವದೆಹಲಿ: ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ(Q2 Results) ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಂಪನಿಯ(Maruti Suzuki) ನಿವ್ವಳ ಲಾಭ 4 ಪಟ್ಟು ಹೆಚ್ಚಳವಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ 475.3 ಕೋಟಿ ರೂ. ನಿವ್ವಳ ಲಾಭ(Net Profit) ದಾಖಲಿಸಿದರೆ ಈ ಹಣಕಾಸು ವರ್ಷದಲ್ಲಿ 2,061 ಕೋಟಿ ರೂ. ಲಾಭ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46 ರಷ್ಟು ಏರಿಕೆಯಾಗಿ 29,931 ಕೋಟಿ ರೂ. ಆದಾಯ ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ 487 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
Advertisement
Advertisement
ಮಾರುತಿ ಕಂಪನಿಯಿಂದ ಷೇರು ಪೇಟೆಗೆ ಈ ಮಾಹಿತಿ ಸಿಗುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಶೇ.5 ರಷ್ಟು ಏರಿಕೆಯಾಗಿದೆ. ಷೇರು ಮೌಲ್ಯ ಒಂದೇ ದಿನ 506.65 ರೂ. ಏರಿಕೆಯಾಗಿದ್ದು ದಿನದ ಅಂತ್ಯಕ್ಕೆ ಒಂದು ಷೇರು ಬೆಲೆ 9,548 ರೂ.ನಲ್ಲಿ ಕೊನೆಯಾಗಿದೆ. ಇದನ್ನೂ ಓದಿ: ಏರ್‌ಬಸ್ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ
Advertisement
ಈ ಅವಧಿಯಲ್ಲಿ 5.17 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.36ರಷ್ಟು ಬೆಳವಣಿಗೆ ಸಾಧಿಸಿದೆ. ಈ ಪೈಕಿ ದೇಶದಲ್ಲಿ 4.54 ಲಕ್ಷ, ವಿದೇಶಕ್ಕೆ 63,195 ಕಾರುಗಳನ್ನು ಮಾರಾಟ ಮಾಡಲಾಗಿದೆ. ತ್ರೈಮಾಸಿಕ ಒಂದರರಲ್ಲಿ ಆಗಿರುವ ಗರಿಷ್ಠ ಮಾರಾಟ ಇದಾಗಿದೆ.
Advertisement
ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದಾಗಿ ಸುಮಾರು 35 ಸಾವಿರ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ.
ಈ ತ್ರೈಮಾಸಿಕದ ಅಂತ್ಯಕ್ಕೆ ಸುಮಾರು 4.12 ಲಕ್ಷ ವಾಹನಗಳ ಆರ್ಡರ್ ಬಾಕಿ ಉಳಿದಿವೆ. ಈ ಪೈಕಿ 1.3 ಲಕ್ಷ ವಾಹನಗಳ ಬುಕ್ಕಿಂಗ್‌ಗಳು ಇತ್ತೀಚಿಗೆ ಬಿಡುಗಡೆ ಮಾಡಲಾದ ಮಾದರಿಗಳಿಗೆ ಬಂದಿದೆ ಎಂದು ತಿಳಿಸಿದೆ.