ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಜಂಟಿ ಯುದ್ಧ ಹಲವು ಕಾರಣಗಳಿಂದ ಪ್ರಾರಂಭವಾದರೂ ಕೂಡ ಖಮೇನಿ ಸಾವಿನ ಬಳಿಕ ಯುದ್ಧ ತೀವ್ರಗೊಂಡಿದೆ. ಇರಾನ್ ಇಸ್ರೇಲ್ ವಿರುದ್ಧ ಖಮೇನಿ (Khamenei) ಸಾವಿನ ಸಾವಿನ ಸೇಡು ತೀರಿಸಿಕೊಳ್ಳಲು ಮುಂದಾದರೂ ಇರಾನ್ ಸ್ಥಳೀಯರೇ ಖುಷಿಪಟ್ಟಿದ್ದರು. ಯಾಕೆ? ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು? ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

1989ರಲ್ಲಿ ಇರಾನಿನ ಇಸ್ಲಾಮಿಕ್ ಕ್ರಾಂತಿಯ ಪಿತಾಮಹ ಅಯತೋಲ್ಲಾ ಖೋಮೆನಿ ನಿಧನರಾದರು. ಅದಾದ ನಂತರ ಅಲಿ ಖಮೇನಿ ಇರಾನ್ ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದರು. ಇದಕ್ಕೂ ಮೊದಲು ಇರಾನ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆಡಳಿತದ ಜೊತೆ ಜೊತೆಗೆ ರಾಜಕೀಯವಾಗಿಯೂ ಹಾಗೂ ಧಾರ್ಮಿಕವಾಗಿಯು ಸಂಪೂರ್ಣ ಹಿಡಿತದೊಂದಿಗೆ ಆಡಳಿತವನ್ನು ನಡೆಸಿದರು. ಈ ಸಮಯದಲ್ಲಿ ಇರಾನ್ ನ ಅಧ್ಯಕ್ಷರಿಗಿಂತ ಹೆಚ್ಚಿನ ಅಧಿಕಾರ ಖಮೇನಿ ಕೈಯಲ್ಲಿತ್ತು. ಮಿಲಿಟರಿ, ವಿದೇಶಾಂಗ ನೀತಿ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇತ್ತು.

ಇದೇ ವೇಳೆ ಇರಾನ್ ನಲ್ಲಿ ಕಟ್ಟು ನಿಟ್ಟಿನ ಕಾನೂನುಗಳನ್ನ ಜಾರಿಗೊಳಿಸಿದರು. ಮಹಿಳೆಯರಿಗೆ ಒಂಬತ್ತನೇ ವಯಸ್ಸಿಗೆ ಹಿಜಬ್ ಧರಿಸುವಂತೆ ಹಾಗೂ ಕಠಿಣವಾದಂತಹ ಸಾಮಾಜಿಕ ನಿರ್ಬಂಧಗಳನ್ನು ಜಾರಿಗೊಳಿಸಿದ್ದರು.
ಅಲ್ಲದೆ ಮಹಿಳೆಯರ ಉಡುಪು ಹಾಗೂ ಅವರ ನಡವಳಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಪಡೆಯನ್ನು ಜಾರಿಗೊಳಿಸಿದರು. ಈ ಮೂಲಕ ಪೊಲೀಸರು ಮಹಿಳೆಯರ ಉಡುಪು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅವರ ನಡವಳಿಕೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೆ ಉದಾಹರಣೆಯಾಗಿ 2022 ರಲ್ಲಿ ಯುವತಿಯೊಬ್ಬಳು ಹಿಜಬ್ ಧರಿಸದ ಕಾರಣಕ್ಕೆ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದರು. ಈ ವೇಳೆ ಆ ಯುವತಿ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದರು. ಇದರಿಂದಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಇದಾದ ಬಳಿಕ ಖಮೇನಿ ಆಡಳಿತ ತುಂಬಾ ಕ್ರೂರವಾಗಿ ಕಾಣಿಸಲು ಶುರುವಾಯಿತು.
ತಮ್ಮ ಆಡಳಿತದಲ್ಲಿ ಹಿಜಾಬ್ ಕಡ್ಡಾಯ, ಬಾಲ್ಯ ವಿವಾಹ ಮತ್ತು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಹಾಗೂ ಕೆಲವು ನಿಯಮಗಳನ್ನ ಜಾರಿಗೊಳಿಸಿದರು.

ಹಿಜಬ್ ಕಡ್ಡಾಯ:
ಖಮೇನಿ. ಆಡಳಿತದಲ್ಲಿ ಹಿಜಬ್ ಧರಿಸುವುದು ಕಡ್ಡಾಯವಾಗಿ ನಿಯಮ ಜಾರಿಗೊಳಿಸಿದರು. ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪೋಲಿಸ್ ಪಡೆಯು ಕಠಿಣವಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 9ನೇ ವಯಸ್ಸು ದಾಟಿದ ಬಳಿಕ ಪ್ರತಿ ಬಾಲಕಿ ಅಥವಾ ಯುವತಿ ಹಿಜಬ್ ಧರಿಸುವುದು ಕಡ್ಡಾಯವೆಂದು ಪೋಷಿಸಿದರು. ಇದಾದ ಬಳಿಕ ಯುವತಿಯ ಸಾವಿನಿಂದ ಖಮೇನಿ ಆಡಳಿತ ಕಠಿಣವಾಗಿ ಕಾಣಲಾರಂಬಿಸಿತ್ತು

ಬಾಲ್ಯ ವಿವಾಹ:
ಇರಾನ್ ನ ಕೆಲವು ಕಾನೂನುಗಳ ಪ್ರಕಾರ, 13 ವರ್ಷ ದಾಟಿದ ಹುಡುಗಿಯರು ಮದುವೆಯಾಗಲು ಅವಕಾಶವಿದೆ. ಈ ನಿಯಮವು ಖಮೇನಿ ಆಡಳಿತದಲ್ಲಿ ಜಾರಿಗೆ ಬಂದಿದ್ದು, ಒಂದು ದೌರ್ಜನ್ಯಕಾರಿ ಪದ್ಧತಿಯಂತಲೇ ಕರೆಯಲಾಗಿದೆ. 13 ವರ್ಷ ದಾಟಿದ ಹುಡುಗಿ ಹಾಗೂ 15 ವರ್ಷ ದಾಟಿದ ಹುಡುಗ ಮದುವೆಯಾಗುವುದು ಇರಾನ್ ನ ಕಾನೂನು. ತಂದೆಯ ಪೋಷಕರು ಹಾಗೂ ನ್ಯಾಯಾಲಯದ ಒಪ್ಪಿಗೆ ಮೇರೆಗೆ 9ನೇ ವಯಸ್ಸಿಗೆ ತಮ್ಮ ಮಗಳ ಮದುವೆಯನ್ನು ಮಾಡುವ ಅವಕಾಶವಿದೆ.
ಇರಾನ್ ನಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಖಮೇನಿ ತಮ್ಮ ಆಡಳಿತದಲ್ಲಿ ಈ ನಿಯಮವನ್ನ ಜಾರಿಗೊಳಿಸಿದರು. ಆದರೆ ಈ ಬಾಲ್ಯ ವಿವಾಹ ಪದ್ಧತಿ ಕ್ರಮೇಣವಾಗಿ ಹಣದಾಸೆಗಾಗಿ ಬಳಸಿಕೊಳ್ಳುವಂತಾಯಿತು.

ಇರಾನ್ ನಲ್ಲಿ ಪ್ರತಿವರ್ಷ ಸುಮಾರು 25 ಸಾವಿರದಿಂದ 30,000 ಹುಡುಗಿಯರು 15 ವರ್ಷಕ್ಕಿಂತ ಮೊದಲೇ ವಿವಾಹವಾಗುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹದ ಕಾರಣದಿಂದಾಗಿ ಸುಮಾರು 20 ರಿಂದ 30 ಶೇಕಡಾದಷ್ಟು ಹುಡುಗಿಯರು ಶಿಕ್ಷಣವನ್ನು ಅರ್ಧದಲ್ಲಿ ತ್ಯಜಿಸಿಬಿಡುತ್ತಾರೆ. ಇನ್ನು 15 ವರ್ಷಕ್ಕಿಂತಲೇ ಮೊದಲು ಮದುವೆಯಾಗುವುದರಿಂದ ಗರ್ಭಿಣಿಯಾದಾಗ ಮರಣ ಪ್ರಮಾಣವು 5 ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಸಂಸ್ಥೆ ವರದಿ ಎಂದು ತಿಳಿಸಿದೆ.
ಶಿಕ್ಷಣ ಮತ್ತು ಉದ್ಯೋಗ:
ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ಖಮೇನಿ ತಮ್ಮ ಆಡಳಿತದಲ್ಲಿ ಅನೇಕ ನಿರ್ಬಂಧಗಳನ್ನು ಹೇರಿದ್ದರು. ಇದರಿಂದಾಗಿ ಪುರುಷರ ಅಧಿಪತ್ಯ ಸ್ಥಾಪಿಸುವ ಕಾನೂನುಗಳನ್ನು ಕೂಡ ಜಾರಿಗೊಳಿಸಿದ್ದರು.
ಅದಲ್ಲದೆ ಖಮೇನಿ ಆಡಳಿತದಲ್ಲಿ ಮಹಿಳೆಯರನ್ನ ಕೇವಲ ಮನೆ ಕೆಲಸ ಹಾಗೂ ಮಕ್ಕಳ ಪಾಲನೆಗೆ ಎಂದು ಸೀಮಿತಗೊಳಿಸಲಾಗಿದೆ. ಇದರ ಹೊರತಾಗಿ ಉನ್ನತ ಶಿಕ್ಷಣದಿಂದ ಮಹಿಳೆಯರನ್ನ ಹೊರಗಿಡಲಾಗಿದೆ. ಅಲ್ಲದೆ ಪುರುಷರ ಅನುಮತಿ ಇಲ್ಲದೆ ಮಹಿಳೆಯರು ಪ್ರಯಾಣ ಮಾಡುವುದು ಮತ್ತು ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿದೆ.
ಇನ್ನು ಪುರುಷ ಪ್ರಧಾನವಾಗಿದ್ದು, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಪುರುಷ ಹಾಗೂ ಮಹಿಳೆಯರ ನಡುವೆ ಪುರುಷರಿಗೆ ಅತಿ ಹೆಚ್ಚು, ಮಹಿಳೆಯರಿಗೆ ಕಡಿಮೆ ಸಂಬಳ ನೀಡುವ ಕೆಲವು ಅಂಶಗಳು ಕಂಡುಬರುತ್ತವೆ. ಮಹಿಳೆಯರು ಶಿಕ್ಷಿತರಾದರು ಕೂಡ ಅವರು ಸ್ವತಂತ್ರರಲ್ಲ ಎನ್ನುವುದು ಇಲ್ಲಿನ ಒಂದು ಪದ್ಧತಿ.

ಈ ಕೆಲವು ಕಠಿಣ ನಿಯಮಗಳನ್ನ ಜಾರಿಗೊಳಿಸಿದ ಖಮೇನಿಯು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿ ‘ ದಿ ಎಪಿಕ್ ಪ್ಯೂರಿ’ ಎಂಬ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಬಲಿ ಪಡೆದರು. 2020ರ ಮಾರ್ಚ್ 1ರಂದು ಇರಾನ್ ಸರ್ಕಾರ ಮತ್ತು ಮಾಧ್ಯಮಗಳು ಖಮೇನಿ ನಿಧನರಾಗಿದ್ದಾರೆ ಎಂದು ಅಧಿಕೃತವಾಗಿ ಖಚಿತ ಪಡಿಸಿದವು. ಖಮೇನಿ ಸಾವಿನ ನಂತರ ಖಮೇನಿ ಜಾರಿ ತಂದಂತಹ ನಿಯಮಗಳು ಇಲ್ಲಿಗೆ ಅಂತ್ಯವಾದವು ಎಂದು ಖುಷಿಯಲ್ಲಿ ಸಂಭ್ರಮಿಸಿದ್ದರು.

