11 ಬಾರಿ ಮದುವೆಯಾದ್ರೂ 12ನೇಯ ಪತಿಗಾಗಿ ಹುಡುಕುತ್ತಿರುವ ಮಹಿಳೆ

Public TV
1 Min Read
Utah woman

52 ವರ್ಷದ ಮಹಿಳೆಯೊಬ್ಬಳು 11 ಬಾರಿ ಮದುವೆಯಾಗಿದ್ದಾಳೆ. ಆದರೆ ಇದೀಗ 12ನೇಯ ಪತಿಗಾಗಿ ಹುಡುಗಾಡುತ್ತಿರುವ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ.

ಭಾರತೀಯ ಸಂಸ್ಕ್ರತಿಯಲ್ಲಿ ಮದುವೆ ಅನ್ನೋದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವ ಸುಮಧುರಕ್ಷಣ ಮತ್ತು ಜೀವನದ ಪ್ರಮುಖ ಘಟ್ಟ ಹಾಗೂ ಭರವಸೆಯ ಕೊಂಡಿಯಾಗಿರುತ್ತದೆ.

marriage app

ಮನುಷ್ಯನ ಜೀವನದಲ್ಲಿ ಅರ್ಥಪೂರ್ಣವಾದ ಹಂತವೇ ಮದುವೆ. ಒಂದು ಮದುವೆ ಆದರೆ ಸಾಕು ಎನ್ನುತ್ತೇವೆ. ಮೊದಲ ಪತಿಯೇ ಪರದೈವ ಎಂದು ಬೇರೆ ಪತಿಯನ್ನು ಕಣ್ಣೆತ್ತಿ ನೋಡುವುದಿಲ್ಲ. ಆದರೆ ಇಲ್ಲಿ ಉತಾನ್ ಮೂಲದ ಮೊನೆಟ್ ಡಯಾಸ್ ಎಂಬ ಮಹಿಳೆ ಮದುವೆಯಾಗುವುದನ್ನೇ ಚಟವನ್ನಾಗಿ ಮಾಡಿಕೊಂಡಿದ್ದಾರೆ. ಇವರು ಒಬ್ಬ ಅಮೆರಿಕಾನ್ ಮಹಿಳೆ ಮತ್ತು ಪ್ರಖ್ಯಾತ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಇದನ್ನೂ ಓದಿ: 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

 

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈಕೆ ಅಲ್ಲಿ ನಾನು 11 ಬಾರಿ ಮದುವೆಯಾಗಿದ್ದೇನೆ, ಆದರೆ ಮತ್ತೆ 12ನೇ ಬಾರಿ ಮದುವೆಯಾಗಬೇಕೆಂದಿದ್ದೇನೆ. ನಾನು 2 ವರ್ಷದವಳಾಗಿದ್ದಾಗಲೇ ಮದುವೆಯ ಮೋಹವನ್ನು ಹೊಂದಿದ್ದೇ. ನಾನು ಮೊದಲಿಗೆ ಪ್ರೀತಿಯಲ್ಲಿ ಬೀಳುತ್ತಿದೆ. ನಂತರ ನನಗೆ ಮದುವೆಯಾದ ಬಳಿಕ ಅವನೊಂದಿಗೆ ಸಂಬಂಧದಲ್ಲಿ ಮುಂದುವರಿಯಲು ಇಷ್ಟವಾಗದಿದ್ದಲ್ಲಿ ನಾನು ಹೊಸ ಗಂಡನನ್ನು ಹುಡುಕುತ್ತಿದ್ದೆ. ನಾನು ಒಮ್ಮೆ ಮದುವೆಯಾದರೆ 2 ತಿಂಗಳು ಮಾತ್ರ ಸಂಸಾರ ಮಾಡುತ್ತಿದ್ದೇನು. ಮೊದಲ ಬಾರಿಗೆ ನಾನು 11ನೇ ಗಂಡನಾದ ಜಾನ್ ಅವರೊಂದಿಗೆ 10 ವರ್ಷ ಜೀವನ ಮಾಡಿದ್ದೇನೆ ಎಂದು ಶೋ ನಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ಇವರ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಇದನ್ನೂ ಓದಿ:  ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *