ಲಂಡನ್: ಝೆಕ್ ಗಣರಾಜ್ಯದ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ (Marketa Vondrousova) ಶನಿವಾರ ವಿಂಬಲ್ಡನ್ (Wimbledon 2023) ಸಿಂಗಲ್ಸ್ ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
Advertisement
ಆಲ್ ಇಂಗ್ಲೆಂಡ್ (England) ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಮ್ಯಾಚ್‌ನಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದ ಝೆಕ್ ಗಣರಾಜ್ಯದ (Czech Republic) 24 ವರ್ಷದ ಟೆನ್ನಿಸ್ ತಾರೆ ಮರ್ಕೆಟಾ 6-4, 6-4 ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಟ್ಯುನಿಶಿಯಾದ ಅನುಭವಿ ಆಟಗಾರ್ತಿ ಓನ್ಸ್ ಜಬೇಯುರ್ (28) ಎದುರು ಗೆಲುವು ಸಾಧಿಸಿದ್ದಾರೆ.
Advertisement
Advertisement
2021ರ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದಿದ್ದ ಮರ್ಕೆಟಾ ವಾಂಡ್ರೊಸೊವಾ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ಮೊಟ್ಟ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದನ್ನೂ ಓದಿ: ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್ ಪಡೆದು ಅಶ್ವಿನ್ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ
Advertisement
Unseeded Marketa Vondrousova of Czech Republic defeats Tunisia’s Ons Jabeur 6-4, 6-4 to win #Wimbledon for her first Grand Slam title ????#GettySport #Tennis #London #AllEngland #WTA
????: @julianfinney, Clive Brunskill, Mike Hewitt pic.twitter.com/mnDQj1ncxi
— Getty Images Sport (@GettySport) July 15, 2023
ಟೂರ್ನಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿಯಾಗಿ ಕಣಕ್ಕಿಳಿದ್ದ ಮರ್ಕೆಟಾ ಆರಂಭದಿಂದಲೂ ಅದ್ಭುತ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದರು. ಅದೇ ಆತ್ಮವಿಶ್ವಾಸದೊಂದಿಗೆ ಫೈನಲ್‌ನಲ್ಲೂ ಕಣಕ್ಕಿಳಿದ ಮರ್ಕೆಟಾ ವಿಜಯ ಸಾಧಿಸಿದ್ದಾರೆ. ಇದನ್ನೂ ಓದಿ: Asian Games 2023ಗೆ ಟೀಂ ಇಂಡಿಯಾ ರೆಡಿ – ರಿಂಕುಗೆ ಕೊನೆಗೂ ಸಿಕ್ತು ಚಾನ್ಸ್, ಫಸ್ಟ್ ರಿಯಾಕ್ಷನ್ ಏನು?
ಇದು ಮರ್ಕೆಟಾ ಗೆದ್ದ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಕಿರಿಟವಾಗಿದೆ. 2019ರ ಫ್ರೆಂಚ್ ಓಪನ್ ಸಿಂಗಲ್ಸ್ ಫೈನಲ್ ತಲುಪಿದ್ದ ಮರ್ಕೆಟಾ, ಆಗಿನ ವಿಶ್ವದ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಟಗಾರ್ತಿ ಆಷ್ಲೇ ಬಾರ್ಟಿ ಎದುರು ನೇರ ಸೆಟ್‌ಗಳಿಂದ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
Web Stories