ಬೆಂಗಳೂರು: ರಾತ್ರಿ ಸಮಯದಲ್ಲಿ ಗಾಂಜಾ (Marijuana) ಮತ್ತಿನಲ್ಲಿ ಹಲ್ಲೆ, ದರೋಡೆ, ಕಳ್ಳತನ ಮಾಡುತ್ತಿದ್ದ ಕದೀಮರನ್ನು ಹಿಡಿಯಲು ಹೋದ ಪೊಲೀಸ್ ಪೇದೆ (Police Constable) ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಸಹ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲಾಖೆಯಲ್ಲಿಯೇ ಅಪಸ್ವರ ಕೇಳಿ ಬಂದಿದೆ.
ಪೊಲೀಸ್ ಪೇದೆ ರಂಗನಾಥ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಪಟ್ಟಣದ ದೇವರಕೊಂಡಪ್ಪ ವ್ರತದಲ್ಲಿ ರಸ್ತೆಯ ಮಧ್ಯದಲ್ಲಿ ಗಾಂಜಾ ಮತ್ತಿನಲ್ಲಿ ಯುವಕರ ತಂಡ ತೂರಾಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಲು ರಂಗನಾಥ್ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಂಡರು, ದಿನ್ನೂರು ರಸ್ತೆಯ ನೀಲಗಿರಿ ತೋಪಿನತ್ತ ಎಸ್ಕೇಪ್ ಆಗಿದ್ದಾರೆ. ಈ ಸಂದರ್ಭದಲ್ಲಿ ಕಿರಾತಕರ ಬೆನ್ನು ಹತ್ತಿದ್ದ ರಂಗನಾಥ್ ನೀಲಗಿರಿ ತೋಪಿನ ಒಳಗೆ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಕ್ಯಾಸಿನೋ ಹುಚ್ಚು – ಬ್ಯಾಂಕ್‌ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ ಮ್ಯಾನೇಜರ್ ಜೈಲುಪಾಲು
Advertisement
Advertisement
ಈ ವೇಳೆ ರೌಡಿ ವರುಣ್ ಅಲಿಯಾಸ್ ಕೆಂಚಾ ಹಾಗೂ ಡ್ಯಾನಿ ಎಂಬ ಇಬ್ಬರು, ಪೊಲೀಸ್ ಪೇದೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಂಗನಾಥ್ ಮರ್ಮಾಂಗ ಹಾಗೂ ದೇಹದ ಹಲವಾರು ಕಡೆ ಗಾಯಗೊಳಿಸಿ ಅಲ್ಲಿಂದ ಎರಡು ದ್ವಿಚಕ್ರ ಬೈಕಿನಲ್ಲಿ ನಾಲ್ವರ ತಂಡ ಎಸ್ಕೇಪ್ ಆಗಿದೆ. ಬೈಕ್‌ಗಳಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಇತ್ತೀಚಿಗೆ ಆನೇಕಲ್ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿರಂತರವಾಗಿ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಹಾಡುಹಗಲಿನಲ್ಲಿ ಕೃತ್ಯಗಳು ನಡೆಯುತ್ತಿವೆ. ನಿನ್ನೆ ಸಂಜೆ ಘಟನೆ ನಡೆದರೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಇಂದು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಗನಾಥ ಆರೋಗ್ಯವನ್ನು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಪುರುಷೋತ್ತಮ್ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಂದ ಹಾಕಿ ವಿಶ್ವಕಪ್ ಟ್ರೋಫಿ-2023 ಅನಾವರಣ