ಚಿಕ್ಕೋಡಿ(ಬೆಳಗಾವಿ): ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಎಲ್ಲಾ ಭಾಷೆಯ ಜನ, ನಟರು, ಅಭಿಮಾನಿಗಳು ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿಯಲಾಗಿದೆ. ಅಂತೆಯೇ ಮಹಾರಾಷ್ಟ್ರದಲ್ಲೂ ಅಭಿಮಾನಿಗಳು ಪುನೀತ್ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಹೌದು. ಕನ್ನಡದ ರಾಜರತ್ನ ಪುನೀತ್ ರಾಜ್‍ಕುಮಾರ್ ಅವರು ಮರಾಠಿಗರ ಮನಸನ್ನೂ ಸಹ ಗೆದ್ದಿದ್ದರು. ಹೀಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ನಗರದಲ್ಲಿ ಅಪ್ಪುಗೆ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮರಾಠಿ ಅಭಿಮಾನಿಗಳು ಪ್ಲೆಕ್ಸ್ ಹಾಕಿ ರಾಜರತ್ನನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟ ಸ್ಥಳೀಯರು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಎಂದು ದೊಡ್ಡದಾದ ಫಲಕ ಹಾಕಿದ್ದಾರೆ. ಒಟ್ಟಿನಲ್ಲಿ ತಮ್ಮ ಅಭಿನಯ ಮತ್ತು ಸಮಾಜಿಕ ಕೆಲಸದಿಂದ ಗೆದ್ದಿದ್ದ ಪುನೀತ್, ಮರಾಠಿಗರ ಮನಸ್ಸನ್ನೂ ಸಹ ಗೆದ್ದಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ರಸ್ತೆಯೊಂದಕ್ಕೆ ಸ್ಥಳೀಯರೇ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟಿದ್ದಾರೆ.