ಹುಬ್ಬಳ್ಳಿ: ನನ್ನನ್ನು ಮತ್ತೆ ಬಿಜೆಪಿಗೆ (BJP) ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದರೆ ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ. ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ತೊರೆದ ನಂತರ ಆಗಿರೋ ಹಾನಿ ಬಗ್ಗೆ ಅವರಿಗೆ ಮನವರಿಕೆ ಆಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಇದ್ದಾರೆ. ದೊಡ್ಡ ಮಟ್ಟದ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕಿರೋ ಮಾಹಿತಿ ಇದೆ. ಯಾರು ಏನೇ ಪ್ರಯತ್ನ ಮಾಡಿದ್ರೂ ನಾನು ಬಿಜೆಪಿಗೆ ವಾಪಸ್ಸಾಗಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್ ದಿಯೋರಾ
Advertisement
Advertisement
ಸಿದ್ದರಾಮಯ್ಯ ಕುರಿತು ಅನಂತ್ ಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನಂತ್ ಕುಮಾರ್ ಹೆಗಡೆ ಹದ್ದುಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ (Lok Sabha Election) ದೃಷ್ಟಿಯಿಂದ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು? ಈಗ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾನಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡೇ ಬಂದ ವೃದ್ಧೆ; ಸರ್ಕಾರಕ್ಕೆ ಹೆಚ್‍ಡಿಕೆ ತರಾಟೆ
Advertisement
ಶ್ರೀರಾಮ ಮಂದಿರವನ್ನು (Ram Mandir) ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಆದರೆ ಬಿಜೆಪಿ ಧರ್ಮದಲ್ಲಿ ರಾಜಕಾರಣವನ್ನು ಬೆರೆಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ಗೆ (Congress) ಆಹ್ವಾನ ನೀಡಿರುವುದು ದೇವಸ್ಥಾನದ ಟ್ರಸ್ಟ್ ಹೊರತು ಬಿಜೆಪಿ ಅಲ್ಲ. ಕಾಂಗ್ರೆಸ್ ಆಹ್ವಾನ ನಿರಾಕರಿಸಿರುವ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ. ಅದನ್ನು ಬಿಟ್ಟು ಬಿಜೆಪಿಯವರು ಯಾಕೆ ಮತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಿಲಿಂದ್ ದಿಯೋರಾ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ: ಏಕನಾಥ್ ಶಿಂಧೆ
Advertisement
ಬಿಜೆಪಿಗೂ ರಾಮಮಂದಿರಕ್ಕೂ ಏನು ಸಂಬಂಧ? ರಾಮಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿಯೇ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆ. ಸುಪ್ರೀಂ ಕೋರ್ಟ್ ತೀರ್ಪು ಆಗಿದೆ. ಆ ರೀತಿ ಈಗ ನಿರ್ಮಾಣ ಕೂಡ ಆಗುತ್ತಿದೆ. ಇದು ಎಲ್ಲರಿಗೂ ಖುಷಿ ತರುವ ವಿಚಾರ. ಆಹ್ವಾನ ಮಾಡೋದು ರಾಮಮಂದಿರ ಟ್ರಸ್ಟ್, ಬಿಜೆಪಿ ಅಲ್ಲಾ. ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಟ್ರಸ್ಟ್ನವರು ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಸಿಎಂಗೆ ಆಹ್ವಾನ ಕೊಟ್ಟಿಲ್ಲ ಎಂದರು. ಇದನ್ನೂ ಓದಿ: ಅನಂತ್ ಕುಮಾರ್, ಸಿದ್ದರಾಮಯ್ಯ ಕಾಲಿನ ಧೂಳಿಗೂ ಸಮನಲ್ಲ: ತಂಗಡಗಿ ವಾಗ್ದಾಳಿ
ಅದು ಟ್ರಸ್ಟ್‌ನವರಿಗೆ ಬಿಟ್ಟಂತಹ ವಿಚಾರ. ಕಾಂಗ್ರೆಸ್‌ನ ನಾಯಕರು ನಾವು ಹೋಗುವುದಿಲ್ಲ ಅಂದಿದ್ದಾರೆಯೇ ಹೊರತು ಬಹಿಷ್ಕಾರ ಅಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಹೋಗಬೇಡಿ ಎಂದಿಲ್ಲ. ಅವರು ಹೋಗೋದಿಲ್ಲ ಅಂದಾಗ ನೀವು ಬಲವಂತವಾಗಿ ಯಾಕೆ ಕರೆದುಕೊಂಡು ಹೋಗುತ್ತೀರಿ? ರಾಮಮಂದಿರ ಸ್ಥಾಪನೆ ವಿಚಾರ ಇದೆಯೋ ಅಥವಾ ಕಾಂಗ್ರೆಸ್ ಟೀಕೆ ಮಾಡುವ ವಿಚಾರ ಇದೆಯೋ? ರಾಮಮಂದಿರ ಉದ್ಘಾಟನೆಗೆ ಬರದೇ ಹೋದರೆ ಹಿಂದು ವಿರೋಧಿ ಅನ್ನೋದು ಸರಿಯಲ್ಲ. ಲೋಕಸಭಾ ಚುನಾವಣೆಗೆ ರಾಮಮಂದಿರವನ್ನು ಉಪಯೋಗಿಸಿಕೊಳ್ಳುತ್ತಿದ್ದೀರಿ. ಕಾಂಗ್ರೆಸ್‌ನಲ್ಲಿ ಎಷ್ಟೋ ನಾಯಕರು ರಾಮ ಭಕ್ತರಿದ್ದಾರೆ. ಅಯೋಧ್ಯೆ ಇಶ್ಯೂ ಈಗಿನದ್ದಲ್ಲ, 91ರದ್ದು. ದತ್ತಪೀಠದ ಇಶ್ಯೂ ಕೂಡ ನಡೆದಿದೆ ಎಂದು ಹೇಳಿದರು. ಇದನ್ನೂ ಓದಿ: ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸವೆಂದಿರೋ ನೀವ್ಯಾಕೆ ಅದನ್ನು ಮಾಡ್ತಿದ್ದೀರಿ?: ಪ್ರದೀಪ್ ಈಶ್ವರ್
ಬಿಜೆಪಿಯವರು ಹಿಂದೂಗಳ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಕಾಂಗ್ರೆಸ್‌ನವರು ಹಿಂದೂ ವಿರೋಧಿಯಾಗಿದ್ದರೆ 136 ಸೀಟು ಬರುತ್ತಿದ್ದರಾ? ಧಾರ್ಮಿಕತೆಯನ್ನು ತೆಗೆದುಕೊಂಡು ರಾಜಕಾರಣ ಮಾಡಿದರೆ ಬಹಳ ದಿನ ನಡೆಯಲ್ಲ. ನಾನು ಯಾವತ್ತೂ ಆಪರೇಷನ್ ಮಾಡಿಲ್ಲ. ಅವರಾಗಿಯೇ ಕಾಂಗ್ರೆಸ್ ಸೇರುತ್ತೇನೆ ಅಂದವರಿಗಷ್ಟೇ ಸ್ವಾಗತ ಕೋರಿದ್ದೇನೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್ ಮಾಳವಿಯಾ ವ್ಯಂಗ್ಯ
ಕೆಲವು ನಾಯಕರನ್ನು ಕಾಂಗ್ರೆಸಿಗೆ ತರುವಂತಹ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಬಿಜೆಪಿ ನಾಯಕರನ್ನು ಕಾಂಗ್ರೆಸ್‌ಗೆ ತರುವಂತ ಕೆಲಸ ನಾನು ಮಾಡಿಲ್ಲ. ತಾವಾಗಿ ಬಂದವರನ್ನು ಸಿಎಂ ಹಾಗೂ ಡಿಸಿಎಂ ಜೊತೆ ಭೇಟಿ ಮಾಡಿಸಿದ್ದೇನೆ. ಕಾಂಗ್ರೆಸ್‌ಗೆ ಸೇರಿಸುವಂತಹ ಪ್ರಯತ್ನ ಮಾಡಿದ್ದೇನೆ ಅಷ್ಟೇ. ಆಪರೇಷನ್ ಅಂತಾರಲ್ಲ ಆ ರೀತಿ ನಾನು ಯಾವತ್ತು ಮಾಡಿಲ್ಲ, ಈಗಲೂ ಮಾಡಲ್ಲ. ಶಂಕರ ಪಾಟೀಲ ಮುನಿಯಪ್ಪ ಅವರ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಅವರೇ ಹೇಳಬೇಕು. ಶಂಕರ ಪಾಟೀಲ ಅವರ ಜೊತೆಗೆ ನಾನು ಈವರೆಗೂ ಅದರ ಬಗ್ಗೆ ಮಾತನಾಡಿಲ್ಲ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕೇಂದ್ರ ಅನುದಾನದ ತಾರತಮ್ಯ ಕುರಿತು ಸಂಬಂಧಪಟ್ಟವರು ಮಾತನಾಡಲಿ. ಅದನ್ನು ಬಿಟ್ಟು ಸಿಟಿ ರವಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ನಮ್ಮ ಎದೆ ಬಗೆದ್ರೆ ಶ್ರೀರಾಮ, ಸಿದ್ದರಾಮಯ್ಯ, ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ: ಪ್ರದೀಪ್ ಈಶ್ವರ್