Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ

Bengaluru City

ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ

Public TV
Last updated: February 22, 2023 3:59 pm
Public TV
Share
4 Min Read
bjp flag
SHARE

ಬೆಂಗಳೂರು: ಬಿಜೆಪಿ (BJP) ಸರ್ಕಾರ ಜನಸಾಮಾನ್ಯರ ಸರ್ಕಾರ. ಜನಸಾಮಾನ್ಯರ ಸಿಎಂ ಆಗಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೊರಹೊಮ್ಮಿದ್ದಾರೆ ಎಂದು ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ (Sudhakar) ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ 446 ಕೋಟಿ ಪರಿಹಾರ ನೀಡಲಾಗಿದೆ: ಆರ್ ಅಶೋಕ್

K SudhaKar

ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಾಗುವುದು. ತೋಟಗಾರಿಕೆ, ರೇಷ್ಮೆ ಸೇರಿ ಕೃಷಿ ವಲಯದ ಸಭೆ, ಕೈಗಾರಿಕೆ, ಸಣ್ಣ ಮಧ್ಯಮ, ಗುಡಿ ಕೈಗಾರಿಕೆ ಸಬಲೀಕರಣಕ್ಕೆ ತಂಡದ ಸಭೆ ನಡೆಸಲಾಗುತ್ತದೆ. ಈ ಸೆಕ್ಟರ್ ಸಭೆಗಳಲ್ಲಿ ಕೇಂದ್ರ ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ವಿವರ ನೀಡಿದರು.

8 ಸಾವಿರ ಸಲಹಾ ಪೆಟ್ಟಿಗೆ
ವಾಟ್ಸಪ್ ಸಂಖ್ಯೆ +91 8595158158 ಗೆ ಜನಸಾಮಾನ್ಯರು ಪ್ರಣಾಳಿಕೆ ಕುರಿತು ಸಲಹೆ ನೀಡಬಹುದು. ಕ್ಯೂಆರ್ ಕೋಡ್ ಮೂಲಕ ಸಲಹೆ ನೀಡಬಹುದು. ಮಂಡಲದ ವಿವಿಧೆಡೆ 25 ಬಾಕ್ಸ್ ಸೇರಿ ಒಟ್ಟು 8 ಸಾವಿರ ಸಲಹಾ ಪೆಟ್ಟಿಗೆ ಇಡಲಾಗುವುದು. ವೆಬ್‌ಸೈಟ್ ಇದ್ದು ಅದನ್ನು ಬಾಕ್ಸ್ ಮೇಲೆ ತಿಳಿಸಿದ್ದೇವೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರನ್ನು ತಲುಪುವ ಗುರಿ ಇದೆ. ಮಾರ್ಚ್ 25 ರವರೆಗೆ 224 ಕ್ಷೇತ್ರಗಳಲ್ಲೂ ಸಭೆ ನಡೆಯಲಿದೆ. ಜೊತೆಗೆ ವಿಡಿಯೋ ವ್ಯಾನ್ ಪ್ರಗತಿ ರಥದಲ್ಲೂ ಸಲಹಾ ಪೆಟ್ಟಿಗೆ ಇರುತ್ತದೆ ಎಂದು ತಿಳಿಸಿದರು.

ಪ್ರತಿ ವರ್ಗದ ಜನರಿಗೆ ಅಭಿವೃದ್ಧಿಯ ಅಮೃತವನ್ನು ತಮ್ಮ ಬಜೆಟ್ ಮೂಲಕ ಮುಖ್ಯಮಂತ್ರಿಗಳು ನೀಡಿದ್ದಾರೆ. ಕಾಂಗ್ರೆಸ್ ಕೇವಲ ಶೇ.38 ಭರವಸೆ ಅನುಷ್ಠಾನ ಮಾಡಿತ್ತು. ಕೋವಿಡ್, ಅತಿವೃಷ್ಟಿಯ ವಿಕೋಪ ಇದ್ದರೂ ಆರ್ಥಿಕ ಹಿಂಜರಿತದ ನಡುವೆ ಇಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನಮಗೆ ಸ್ಪಷ್ಟ ಬಹುಮತವನ್ನು ಕೊಡಿ. ನೂರಕ್ಕೆ ನೂರು ಭರವಸೆಗಳನ್ನು ಈಡೇರಿಸುತ್ತೇವೆ ಎಂದರು. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ

BASAVARAJ BOMMAI BUDGET 2

ಡಬಲ್ ಎಂಜಿನ್ ಸರ್ಕಾರವು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ. ರೈಲ್ವೆ ಸೇರಿ ಅನೇಕ ರಾಷ್ಟ್ರೀಯ ಯೋಜನೆಗಳಾಗಿವೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಶ್ರಮಿಸಿವೆ. ಡಬಲ್ ಎಂಜಿನ್ ಸರ್ಕಾರದ ಸಾಧನೆ ಏನು ಎಂದು ಕೇಳುವವರಿಗೆ ಇದು ತಕ್ಕ ಉತ್ತರ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಮೈಸೂರು ರನ್‍ವೇ ವಿಸ್ತರಣೆ ನಡೆದಿದೆ. ಬೆಂಗಳೂರು-ಮೈಸೂರು ದಶಪಥ ಯೋಜನೆ ಸಿದ್ಧಗೊಂಡಿದೆ. ಹಿಂದೆ ಕಾಂಗ್ರೆಸ್ ಸರ್ಕಾರವು ನೀರಾವರಿಗೆ 10 ಸಾವಿರ ಕೋಟಿ ಕೊಡುವ ಭರವಸೆ ನೀಡಿತ್ತು. ಯುಕೆಪಿಗೆ 5 ವರ್ಷದಲ್ಲಿ 5 ಸಾವಿರ ಕೋಟಿಯನ್ನೂ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಿದ್ದು, ಮಧ್ಯಕರ್ನಾಟಕದ ಜನರಿಗೆ ನೀರಾವರಿ, ಕುಡಿಯುವ ನೀರಿಗೆ ಪ್ರಯೋಜನ ಸಿಗಲಿದೆ. ಕಳಸಾ ಬಂಡೂರಿ ಯೋಜನೆಗೆ 1 ಸಾವಿರ ಕೋಟಿ ಕೊಡಲಾಗಿದೆ. ಇದರ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಕೇಂದ್ರದಲ್ಲಿ ಯುಪಿಎ, ಕರ್ನಾಟಕ, ಗೋವಾದಲ್ಲಿ ಕಾಂಗ್ರೆಸ್ ಇದ್ದರೂ ಅದನ್ನು ಅನುಷ್ಠಾನಕ್ಕೆ ತಂದಿರಲಿಲ್ಲ ಎಂದು ಟೀಕಿಸಿದರು.

ಬ್ರ್ಯಾಂಡ್ ಬೆಂಗಳೂರು ಉಳಿಸಿ ಬೆಳೆಸುವ ಜೊತೆಗೆ ಬಿಯಾಂಡ್ ಬೆಂಗಳೂರು ಪ್ರಗತಿಗೆ ಮುಂದಾಗಿದ್ದೇವೆ. ಕೊಪ್ಪಳದ ಆಟಿಕೆ ತಯಾರಿಕೆ ಘಟಕದಿಂದ 25 ಸಾವಿರ ಜನರಿಗೆ ನೇರ ಉದ್ಯೋಗ, 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸಿಗುತ್ತಿದೆ. ಸೆಮಿ ಕಂಡಕ್ಟರ್ ಹೂಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. 1.16 ಲಕ್ಷ ಕೋಟಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಬಳಸಿದ್ದಾರೆ. 4 ಸಾವಿರ ಕಿಮೀ ಹೆದ್ದಾರಿ ನಿರ್ಮಾಣ ಆಗಿದೆ. ಡಬಲ್ ಎಂಜಿನ್ ಏನು ಮಾಡಿದೆ ಎಂದು ಕೇಳುವವರು ಗಮನಿಸಬೇಕು. 12 ಕೋಟಿ ಕೋವಿಡ್ ಲಸಿಕೆಗೆ ಎಷ್ಟಾಗುತ್ತದೆ? ಔಷಧಿ, ಚಿಕಿತ್ಸೆ, ಲಸಿಕೆ ಉಚಿತ ಇತ್ತು. ಯಾವ ದೇಶದಲ್ಲೂ ಇದನ್ನು ಮಾಡಿಲ್ಲ ಎಂದು ವಿವರಿಸಿದರು.

Mysuru Bengaluru Highway

ಕೋವಿಡ್ ಅನ್ವಯ ಗರೀಬ್ ಕಲ್ಯಾಣ್ ಯೋಜನೆಯಡಿ 2 ವರ್ಷದಿಂದ ಉಚಿತ ಆಹಾರ ನೀಡಲಾಗುತ್ತಿದೆ. ಕಾಂಗ್ರೆಸ್‍ನವರು ಅನ್ನಭಾಗ್ಯ ಬ್ರ್ಯಾಂಡ್ ಅನ್ನು ತಮ್ಮದೆಂದು ತಿಳಿಸಿ ಪ್ರಚಾರ ಮಾಡಿದ್ದರು ಎಂದು ಆಕ್ಷೇಪಿಸಿದರಲ್ಲದೇ, ಜನರಿಗೆ ಅಕ್ಕಿ, ಭತ್ತ, ತೌಡು ಯಾರು ಮಾಡಿದ್ದಾರೆಂದು ಗೊತ್ತಿದೆ. ಅಕ್ಕಿ ಕೊಟ್ಟವರು ನಾವು. ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ ನಾವು ಗರಿಷ್ಠ ಅನುದಾನ ಕೊಟ್ಟಿದ್ದೇವೆ. ಮೀಸಲಾತಿ ವಿಚಾರದಲ್ಲಿ ನಾವು ಬದ್ಧತೆಯಿಂದ ಪ್ರಮಾಣ ಹೆಚ್ಚಳವನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್‍ನವರು ಕೇವಲ ಬಾಯಿ ಮಾತಿನಲ್ಲಿ ಅದನ್ನು ಹೇಳುತ್ತ ಬಂದಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರವನ್ನು ನೀಡಿದ್ದೇವೆ. ಬ್ಯಾಂಕ್ ಸಾಲ, ಮನೆ ಇಲ್ಲದೆ ದಯನೀಯ ಸ್ಥಿತಿಯಲ್ಲಿ ಇದ್ದರು. ನೆನೆಗುದಿಗೆ ಬಿದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದೇವೆ. ರೈತ ಸಮ್ಮಾನ್ ಯೋಜನೆಯಡಿ ನಮ್ಮ ರಾಜ್ಯದಲ್ಲಿ 59 ಲಕ್ಷ ಕೃಷಿಕರಿಗೆ ಪ್ರಯೋಜನ ಸಿಗುತ್ತಿದೆ. ಇವರಿಗೆ 10 ಸಾವಿರ ರೂ. ನೇರವಾಗಿ ಸಿಗುತ್ತಿದೆ. ಇದು ದೇಶದ ಇತಿಹಾಸದಲ್ಲೇ ಮೊದಲು. ರೈತರಿಗೆ ಸ್ಪಷ್ಟ ಕಾರ್ಯಕ್ರಮ ಕೊಡಲು ಕಾಂಗ್ರೆಸ್ ವಿಫಲವಾಗಿತ್ತು. ರೈತ ವಿದ್ಯಾನಿಧಿ ಸೇರಿ ಹೊಸ ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಇದು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪರಿಣಾಮ ಬೀರುತ್ತಿದೆ. ಇದರಡಿ 12 ಲಕ್ಷ ಜನರಿಗೆ 460 ಕೋಟಿಯನ್ನು ವಿನಿಯೋಗಿಸಿದ್ದೇವೆ. ದಯನೀಯವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ಸಿಗುತ್ತಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ (B.C.Nagesh) ಮಾತನಾಡಿ, ಜನಸಾಮಾನ್ಯರ ಆಶಯಕ್ಕೆ ಅನುಗುಣವಾಗಿ ಸರ್ಕಾರ ಮುಂದುವರಿಯಲಿದೆ. ಅಂತ್ಯೋದಯದಲ್ಲಿ ನಂಬಿಕೆ ಬಿಜೆಪಿಯದು. ಬಿಜೆಪಿಗೆ ಪೂರ್ಣ ಬಹುಮತ ಕೊಡಲು ಜನರಲ್ಲಿ ಮನವಿ ಮಾಡಿದರು. ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bengalurubjpcongressK Sudhakarಕಾಂಗ್ರೆಸ್ಕೆ.ಸುಧಾಕರ್ಬಿಜೆಪಿಬೆಂಗಳೂರು
Share This Article
Facebook Whatsapp Whatsapp Telegram

Cinema news

Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories
Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories
Rashmika Mandanna Vijay Deverakonda 1
ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ
Cinema Latest South cinema

You Might Also Like

internal conflict in davanagere bjp
Davanagere

ದಾವಣಗೆರೆ ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ – ಸಂಧಾನ ಸಭೆ ವಿಫಲ

Public TV
By Public TV
1 minute ago
West Bengal Governor CV Ananda Bose Resigns
Latest

ಆನಂದ ಬೋಸ್ ರಾಜೀನಾಮೆ – ಪಶ್ಚಿಮ ಬಂಗಾಳಕ್ಕೆ ಆರ್.ಎನ್. ರವಿ ನೂತನ ರಾಜ್ಯಪಾಲ

Public TV
By Public TV
7 minutes ago
ಬೆಂಗಳೂರು ವಿಮಾನ ನಿಲ್ದಾಣ
Bengaluru City

ಮತ್ತೆ ಬೆಂಗಳೂರು ಏರ್‌ಪೋರ್ಟ್‌ಗೆ ಜಾಗತಿಕ ಗೌರವ – ಸತತ 4ನೇ ಬಾರಿ ಪ್ರಶಸ್ತಿ

Public TV
By Public TV
47 minutes ago
Nancy Grewal
Crime

ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

Public TV
By Public TV
1 hour ago
ಕರ್ನಾಟಕ ರಾಜ್ಯ ಬಜೆಟ್‌- 2025
Bengaluru City

ಶುಕ್ರವಾರ ಬೆಳಗ್ಗೆ 10:15ಕ್ಕೆ ಬಜೆಟ್‌: ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ. ಸೆಸ್?

Public TV
By Public TV
1 hour ago
murder of woman for gold accused arrested in karwar
Crime

ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ, ಶವ ವಿವಸ್ತ್ರಗೊಳಿಸಿ ವಿಕೃತಿ – ಆರೋಪಿ ಅರೆಸ್ಟ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?