ಮಂಗಳೂರು: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಯುವಕನೋರ್ವ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್‌ನಲ್ಲಿ ದಾಂಧಲೆ ನಡೆಸಿದ್ದು, ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು (Konaje Police) ಯುವಕನನ್ನು ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿ ಜೈಲಿಗಟ್ಟಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧಿಕ್ (24) ಬಂಧಿತ ಯುವಕ. ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ಧಿಕ್ ರಸ್ತೆ ಮಧ್ಯದ ಡಿವೈಡರ್‌ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ದಾಂಧಲೆ ನಡೆಸುತ್ತಿದ್ದ. ಈ ವೇಳೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ಧಿಕ್‌ನನ್ನು ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ.
Advertisement
Advertisement
ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಮಾಜಿ ಯೋಧ ಸಂತೋಷ್ ಎಂಬವರು ಚಾಣಾಕ್ಷತನದಿಂದ ಸಿದ್ಧಿಕ್‌ನನ್ನು ಲಾಕ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು ವೀಡಿಯೋ ತುಣುಕು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜನರಲ್ ತಿಮ್ಮಯ್ಯ ವೃತ್ತಕ್ಕೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್ – ನೆಲಕ್ಕುರುಳಿದ ಸೇನಾನಿ ಪ್ರತಿಮೆ
Advertisement
Advertisement
ಆರೋಪಿ ಅಬ್ಬೂಬಕ್ಕರ್ ಸಿದ್ಧಿಕ್‌ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅಮಲು ಪದಾರ್ಥ ಸೇವಿಸಿದ್ದು ದೃಢಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ತಮಿಳುನಾಡಿಗೆ ಮತ್ತಷ್ಟು ನೀರು – 105 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
Web Stories