ಮಂಗಳೂರು: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ (Charmadi Ghat) ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ನಡೀತಾ ಎಂಬ ಪ್ರಶ್ನೆ ಮೂಡಿದೆ.
ಮಂಗಳೂರು ಬಾಂಬ್ ಸ್ಪೋಟ (Mangaluru Bomb Blast) ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿದೆ. ಸ್ಯಾಟಲೈಟ್ ಕರೆ (satellite Call) ತನಿಖೆಗೆ ಹೋದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಸಿಕ್ಕಿವೆ.
Advertisement
Advertisement
ಬೆಳ್ತಂಗಡಿಯಲ್ಲಿ ಸಾಟ್ ಲೈಟ್ ಕಾಲ್ ಸದ್ದು ಮಾಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಧರ್ಮಸ್ಥಳ ಪಿಎಸ್‍ಐ ಅನಿಲ್ ಕುಮಾರ್ ತಂಡದಿಂದ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶ (Bendrala Forest Area) ದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೈಸೂರು, ಮಂಗಳೂರಷ್ಟೇ ಅಲ್ಲ ಉಡುಪಿ ಕೃಷ್ಣಮಠದ ಬಳಿಯೂ ಶಾರೀಕ್ ಓಡಾಟ!
Advertisement
Advertisement
ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ ಹಿನ್ನೆಲೆಯಲ್ಲಿ ಬೆಂದ್ರಾಳ ಸುತ್ತಮುತ್ತ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಮಂಗಳೂರು ಬಾಂಬ್ ಬ್ಲಾಸ್ಟ್ ಹಿಂದಿನ ದಿನ ಸಾಟಲೈಟ್ ಕಾಲ್ ಸದ್ದು ಮಾಡಿತ್ತು. ಕಳೆದ ಏಳೆಂಟು ದಿನದ ಹಿಂದೆ ಚಾರ್ಮಾಡಿ ಅರಣ್ಯದಂಚಿನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಆತಂಕ ಸೃಷ್ಟಿಯಾಗಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಪ್ರಮಾಣದ ಸ್ಪೋಟದ ಸದ್ದು ಕೇಳಿಸಿತ್ತು. ಅದೊಂದು ಭಾರೀ ಸದ್ದು ಕೇಳಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಗಿತ್ತು.
ಸ್ಯಾಟಲೈಟ್ ಕರೆ ಹಿಂದೆ ಬಿದ್ದ ಪೊಲೀಸರಿಗೆ ಗ್ರಾಮಸ್ಥರು ಈ ಮಾಹಿತಿಯನ್ನು ನೀಡಿದರು. ಚೆಲುವಮ್ಮ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಭಾರೀ ಪ್ರಮಾಣದ ಸದ್ದು ಕೇಳಿಬಂದಿತ್ತು. ಆನೆ ಬಂದಾಗ ಓಡಿಸಲು ಗರ್ನಲ್, ಪಟಾಕಿ ಅಂತಾ ಎಲ್ಲರೂ ಅಂದುಕೊಂಡಿದ್ದೆವು. ಆದರೆ ಅದು ಗರ್ನಲ್ ಪಟಾಕಿ ಸೌಂಡ್ ಗಿಂತ ಹೆಚ್ಚಾಗಿತ್ತು ಅಂತಾ ಮಾಹಿತಿ ಅಂತ ತಿಳಿಸಿದ್ದರು.