KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ

Public TV
1 Min Read
KRS MANDYA

ಮಂಡ್ಯ: ಕೆಆರ್‍ಎಸ್‍ನಲ್ಲಿ (KRS) 10 ಟಿಎಂಸಿ ನೀರು ಖಾಲಿಯಾದ ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ (Tamil Nadu) ನೀರು ಹರಿಸುವುದನ್ನು ಗುರುವಾರ ಸಂಜೆಯಿಂದ ಬಂದ್ ಮಾಡಿದೆ. ಈಗ ಜಲಾಶಯದಲ್ಲಿ 25 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಮತ್ತೆ ಮಳೆಯಾಗದಿದ್ದರೆ ಡಿಸೆಂಬರ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ಕೆಆರ್‍ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೂ ತಮಿಳುನಾಡಿಗೆ ನೀರು ಹರಿಸಲಾಗಿತ್ತು. ಇದರಿಂದ ಕೆಆರ್‍ಎಸ್ ಡ್ಯಾಂ ನೀರಿನ ಮಟ್ಟ ಕುಸಿತವಾಗಿದೆ. 15 ದಿನಗಳ ಹಿಂದೆ 113 ಅಡಿ ನೀರು ಸಂಗ್ರಹವಾಗಿತ್ತು. ಈಗ 102 ಅಡಿಗೆ ಕುಸಿತ ಕಂಡಿದೆ. ಈಗ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದನ್ನೂ ಓದಿ: `ಆಲಮಟ್ಟಿ’ ಭರ್ತಿಯಾದ್ರೂ ಬಾಗಿನ ಅರ್ಪಿಸದ ಸಿಎಂ – ಮೈಸೂರಿಗೊಂದು, ಉತ್ತರ ಕರ್ನಾಟಕ ಭಾಗಕ್ಕೊಂದು ನೀತಿ ಎಂದು ಜನಾಕ್ರೋಶ

ಮಳೆಯಾಗದೆ ಇದ್ದರೆ ಡಿಸೆಂಬರ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಇನ್ನೂ ಬೇಸಿಗೆಯಲ್ಲಂತೂ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಎದುರಾಗಲಿದೆ. ಡ್ಯಾಂನಿಂದ ನಾಲೆಗಳ ಮೂಲಕ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡುಗಡೆ ಮುಂದುವರೆಸಲಾಗಿದೆ. ಕಾವೇರಿ ನೀರಾವರಿ ನಿಗಮ 5,743 ಕ್ಯೂಸೆಕ್ ನೀರನ್ನು ಇದಕ್ಕಾಗಿ ಬಿಡುಗಡೆ ಮಾಡುತ್ತಿದೆ. ಇದನ್ನೂ ಓದಿ: ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

ಕೆಆರ್‍ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 102.74 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 25.035 ಟಿಎಂಸಿ
ಒಳ ಹರಿವು – 3,276 ಕ್ಯೂಸೆಕ್
ಹೊರ ಹರಿವು – 5,743 ಕ್ಯೂಸೆಕ್

Web Stories

Share This Article