ವಿಜಯಪುರ: ವಿಜಯಪುರದಲ್ಲಿ (Vijayapura) ಉತ್ತಮ ಮಳೆಯಾಗದಿದ್ದರೂ ಮಹಾರಾಷ್ಟ್ರದಲ್ಲಿ ಮಳೆರಾಯ ಅಬ್ಬರಿಸಿದ್ದರಿಂದ ಕೃಷ್ಣಾ ನದಿ ತುಂಬಿ ಆಲಮಟ್ಟಿ ಜಲಾಶಯ (Almatti Dam) ಆಗಸ್ಟ್ ಮೊದಲ ವಾರದಲ್ಲೇ ತುಂಬಿದೆ. ಆದರೆ ಈವರೆಗೂ ಸಿಎಂ ಬಾಗಿನ ಅರ್ಪಿಸಲು ಬಂದಿಲ್ಲ. ಸರ್ಕಾರ ಮೈಸೂರು ಭಾಗಕ್ಕೊಂದು, ಉತ್ತರ ಕರ್ನಾಟಕ ಭಾಗಕ್ಕೊಂದು ನೀತಿ ಅನುಸರಿಸುತ್ತಿದ್ದಾರೆ ಎಂದು ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಳಿ ಜಿಲ್ಲೆಗಳ ಜನ, ಜಾನುವಾರು ಸೇರಿದಂತೆ ಜಮೀನುಗಳಿಗೂ ಆಲಮಟ್ಟಿ ಜಲಾಶಯವೇ ಆಶಾಕಿರಣವಾಗಿದೆ. ಮುಂಗಾರು ಮಳೆ ಕೈ ಕೊಟ್ಟರು ಜಲಾಶಯ ತುಂಬಿದ್ದು, ಅವಳಿ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ನೀರು ಬಂದ್ – ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ
Advertisement
Advertisement
ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಒರೆಸುವ ಕೆಲಸ ಮಾಡುತ್ತಿದೆ. ಇದನ್ನು ಬಿಟ್ಟು ಈ ಕೂಡಲೆ ಸಿಎಂ ಸಿದ್ದರಾಮಯ್ಯ (Siddaramaiah) ಬಂದು ಅವಳಿ ಜಿಲ್ಲೆಗಳ ಜೀವನದಿ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ. ಅಲ್ಲದೆ ಸಿಎಂ ಇದಕ್ಕೆ ಹಿಂದೇಟು ಹಾಕಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಲಕ್ಷ್ಮಿಯರಿಗೆ ದೇಗುಲದಲ್ಲಿ ಸಿಗಲಿದೆ ಸ್ಪೆಷಲ್ ಗಿಫ್ಟ್
Advertisement
Web Stories