ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಭಾನುವಾರ ಫುಟ್‍ಬಾಲ್ ಆಟಗಾರ ಮೇಸನ್ ಗ್ರೀನ್‍ವುಡ್‍ನನ್ನು ಅಮಾನತುಗೊಳಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಸಾಮಾಜಿಕ ಜಾಲತಾಣದಲ್ಲಿ ಗ್ರೀನ್‍ವುಡ್, ಮಹಿಳೆಯ ಮೇಲೆ ಹಲ್ಲೆ ಎಸೆಗಿದ್ದಾರೆಂಬ ಆರೋಪದ ಫೋಟೋಗಳು ವೈರಲ್ ಆಗಿವೆ. ಆಟಗಾರನ ಮೇಲೆ ಅತ್ಯಾಚಾರ ಆರೋಪವೂ ಕೇಳಿಬಂದಿದೆ. ಆರೋಪ ಸಾಬೀತಾಗುವವರೆಗೆ ಕ್ಲಬ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ರೀತಿಯ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆರೋಪವು ಸಾಬೀತಾಗುವವರೆಗೆ ಮೇಸನ್ ಗ್ರೀನ್‍ವುಡ್ ತರಬೇತಿಗೆ ಹಿಂತಿರುಗುವಂತಿಲ್ಲ. ಪೊಲೀಸ್ ತನಿಖೆಯ ಮುಂದಿನ ಸೂಚನೆ ಬರುವವರೆಗೆ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್
Advertisement
Bro wtf mason greenwood is physically abusing his girlfriend? pic.twitter.com/U1hd0X48r7
— I am Negan (@freakforbruno) January 30, 2022
Advertisement
ಹಲ್ಲೆ ಆರೋಪದ ಕುರಿತು ಗ್ರೀನ್‍ವುಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೋ, ಛಾಯಾಚಿತ್ರಗಳು ಮತ್ತು ಆಡಿಯೋ ರಿಕಾರ್ಡಿಂಗ್ ಸೇರಿದಂತೆ ಗ್ರೀನ್‍ವುಡ್ ವಿರುದ್ಧದ ಆರೋಪಗಳನ್ನು ಭಾನುವಾರ ಬೆಳಿಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ನಂತರದಲ್ಲಿ ಅಳಿಸಲಾಗಿದೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಘಟನೆಯ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅತ್ಯಾಚಾರ ಮತ್ತು ಹಲ್ಲೆ ಆರೋಪದ ಶಂಕೆಯ ಮೇಲೆ ಗ್ರೀನ್‍ವುಡ್‍ನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಆಟಗಾರನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ
Advertisement
ಗ್ರೀನ್‍ವುಡ್ 24 ಪಂದ್ಯಗಳನ್ನಾಡಿದ್ದು, 6 ಗೋಲು ಮಾಡಿದ್ದಾರೆ. ಯುನೈಟೆಡ್‍ನ ಅಕಾಡೆಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಒಮ್ಮೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.