ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರ ಮದುವೆಗೆ ನಟ ಸಲ್ಮಾನ್ ಖಾನ್ ಕೊನೆಗೂ ಶುಭಾಶಯ ತಿಳಿಸಿದ್ದಾರೆ.
Advertisement
ಹಿಂದಿಯ ಬಿಗ್‍ಬಾಸ್ ಸೀಸನ್-15ರ ಕಾರ್ಯಕ್ರಮ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದ ಸಲ್ಮಾನ್ ಖಾನ್ ಅವರು ಕತ್ರಿನಾ ಅವರಿಗೆ ವಿಶ್ ಮಾಡಿದ್ದಾರೆ. ನಟ ಹೃತಿಕ್ ರೋಷನ್ ಅಭಿನಯಿಸಿದ್ದ ಅಗ್ನಿಪತ್ ಸಿನಿಮಾದ ವಿಶೇಷ ಸಾಂಗ್ ಚಿಕ್ಕಿನಿ ಚಮ್ಮೆಲಿ ಹಾಡಿಗೆ ಕತ್ರಿನಾ ಕೈಫ್ ಸೊಂಟ ಬಳುಕಿಸಿದ್ದರು. ಈ ಹಾಡಿಗೆ ಬಿಗ್‍ಬಾಸ್ ವೇದಿಕೆಯಲ್ಲಿ ಹೆಜ್ಜೆ ಹಾಕುವಂತೆ ನಟಿ ರಾಖಿ ಸಾವಂತ್, ರುಬಿನಾ ದಿಲಾಯಿಕ್ ಸಲ್ಮಾನ್ ಖಾನ್ ಅವರಿಗೆ ಸವಾಲೊಡ್ಡುತ್ತಾರೆ. ಈ ವೇಳೆ ಸಲ್ಮಾನ್ ಖಾನ್ ಕ್ಯಾಮೆರಾದತ್ತಾ ನೋಡುತ್ತಾ ಕತ್ರಿನಾ ಶಾದಿ ಮುಬಾರಕ್ ಹೋ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ
Advertisement
Advertisement
ಇನ್ನೂ ಬಿಗ್‍ಬಾಸ್ ಪ್ರೋಮೋವೊಂದರಲ್ಲಿ ಶೆಹನಾಜ್ ಗಿಲ್ ಕತ್ರಿನಾ ಕೈಫ್ ಅವರ ಮದುವೆಯ ವಿಚಾರವಾಗಿ ಸಲ್ಮಾನ್ ಖಾನ್ ಅವರೊಂದಿಗೆ ಮಾತನಾಡಿದ್ದಾರೆ. ಕತ್ರಿನಾ ಈಗ ಪಂಜಾಬಿ ಅವರಾಗಿಬಿಟ್ಟಿದ್ದಾರೆ. ಕಾರಣ ಅವರ ಮದುವೆ ವಿಕ್ಕಿ ಅವರ ಜೊತೆ ಆಗಿಬಿಟ್ಟಿದೆ. ನೀವು ಸಂತೋಷವಾಗಿರಿ ಅದಕ್ಕಿಂತ ಜಾಸ್ತಿ ಏನು ಹೇಳಲ್ಲ ಕ್ಷಮಿಸಿ ಎಂದರು. (ಸರ್ ಆಪ್ ಖುಷ್ ರಹೋ ಬಾಸ್. ಕ್ಷಮಿಸಿ, ಮೈನ್ ಜ್ಯಾದಾ ತೋ ನಹೀ ಬೋಲ್ ರಾಹಿ) ನೀವು ಒಬ್ಬಂಟಿಯಾಗಿರುವುದು ಉತ್ತಮ ಎಂದು ಕೂಡಾ ಅವರು ಹೇಳಿದ್ದಾರೆ. ಆಗ ಸಲ್ಮಾನ್ ಖಾನ್ ನಾನು ಒಬ್ಬಂಟಿಯಾಗಿರುವಾಗ ಇನ್ನೂ ಉತ್ತಮವಾಗುತ್ತೇನೆ ಎಂದಿದ್ದಾರೆ. ಇದಕ್ಕೆ ಶೆಹನಾಜ್ ಸಲ್ಮಾನ್‍ಗೆ ನೀವು ಕಮಿಟ್? ಆಗಿದ್ದಾರೆ ಎಂದು ಕೇಳಿದ್ದಾರೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ
Advertisement
View this post on Instagram
ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‍ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನೆರವೇರಿತ್ತು. ಡಿ.9ರಂದು ಈ ಜೋಡಿ ಹಸೆಮಣೆ ಏರಿತ್ತು. ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತಿಥಿಗಳಿಗೆ ನೋ ಫೋಟೋ ನಿಯಮ ವಿಧಿಸಲಾಗಿತ್ತು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವೀಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಹೀಗಾಗಿ ಈ ಮದುವೆಯನ್ನು ಇಷ್ಟೊಂದು ಗುಟ್ಟಾಗಿ ನೆರವೇರಿಸಲಾಗಿದೆ ಎನ್ನಲಾಗುತ್ತಿತ್ತು. ಆದರೆ ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.