ಬೆಂಗಳೂರು: ಸೆಕ್ಯೂರಿಟಿ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಮರ್ಥನೆ ಮಾಡಿಕೊಂಡಿದ್ದಾರೆ.
ಗನ್ ಹಿಡಿದು ಸಿಎಂ ಗೆ ಹಾರ ಹಾಕಿದ ಪ್ರಕರಣ ಸಂಬಂಧ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಜೊತೆನೂ ಗನ್ ಮ್ಯಾನ್ ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಏನಿದು ಪ್ರಕರಣ?: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ (Loksabha Election Campaign) ತೊಡಗಿದ್ದರು. ಈ ವೇಳೆ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಸುದ್ದಿಯಾಯಿತು. ಇದನ್ನೂ ಓದಿ: ಲೈಫ್ ಥ್ರೆಟ್ ಇರೋದ್ರಿಂದ ಪ್ರತೀ ದಿನ ಗನ್ ಇಟ್ಕೊಂಡೇ ಹೊರಗೆ ಬರ್ತೀನಿ: ರಿಯಾಜ್ ಅಹಮದ್
Advertisement
ಇದಾದ ಬಳಿಕ ರಿಯಾಜ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮುಂದೆ ರಿಯಾಜ್, ನಂಗೆ ಲೈಫ್ ಥ್ರೆಟ್ ಇದೆ. ಹೀಗಾಗಿ ಪ್ರತೀ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆ. ಹೊರತು ಸಿಎಂ ಮುಂದೆ ಗನ್ ಪ್ರದರ್ಶನ ಮಾಡಬೇಕು ಅನ್ನೊ ಉದ್ದೇಶ ನನಗಿರಲಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
Advertisement
ನಮ್ಮ ದೇವರಾಜ್ ಸಾಹೇಬ್ರು ಮೇಲೆ ಬಾ ಅಂದ್ರು. ಹೀಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕಿದೆ. ಅವರು ಕರೆಯದಿದ್ದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. ನನ್ನ ಪಾಡಿಗೆ ನಾನು ಸಿಎಂ ಪ್ರಚಾರದ ವೆಹಿಕಲ್ ಬಂದಾಗ ಸೈಡಲ್ಲಿ ನಿಂತುಕೊಂಡು ನೋಡುತ್ತಿದ್ದೆ. ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ಶೋ ಮಾಡಿಲ್ಲ ಎಂದು ರಿಯಾಜ್ ಪೊಲೀಸರ ಮುಂದೆ ಹೇಳಿದ್ದು, ಇದೀಗ ರಿಯಾಜ್ ಹೇಳಿಕೆಯನ್ನು ಸಿದ್ದಾಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ.