ಪಾಟ್ನಾ: ಯುವಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದಾಳಿ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಭಕ್ತಿಯಾರ್‍ಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ಭಾನುವಾರ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
Advertisement
Advertisement
ಯುವಕ ಹಲ್ಲೆಗೆ ಮುಂದಾಗುತ್ತಿರುವ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋದಲ್ಲಿ, ಸುಮಾರು 30 ವರ್ಷದೊಳಗಿನ ಯುವಕ ಹಿಂಬದಿಯಿಂದ ಬಂದು ನಿತೀಶ್ ಕುಮಾರ್ ಮುಂದೆ ನಿಂತುಕೊಳ್ಳುತ್ತಿರುವುದನ್ನು ನೊಡಬಹುದಾಗಿದೆ. ಕೂಡಲೇ ಸಿಎಂ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನೊಬ್ಬ ದುಬಾರಿ ಗಿಫ್ಟ್ ನೀಡುವುದಾಗಿ ಮಹಿಳೆಗೆ 5.10ಲಕ್ಷ ರೂ. ವಂಚಿಸಿದ
Advertisement
Bihar CM Nitish Kumar asked the officers not to take any action on the boy who attacked him. CM also asked officials to look into the complaints made by the boy: Government official
— ANI (@ANI) March 27, 2022
Advertisement
ಯುವಕನನ್ನು ಶಂಕರ್ ಕುಮಾರ್ ವರ್ಮಾ ಅಲಿಯಾಸ್ ಚೋಟು (32) ಎಂದು ಗುರುತಿಸಲಾಗಿದೆ. ಈತ ಭಕ್ತಿಯಾರ್ ಪುರ್ ಪ್ರದೇಶದ ಮೊಹಮ್ಮದ್ ಪುರ ನಿವಾಸಿಯಾಗಿದ್ದು, ಪುಟ್ಟ ಜ್ಯವೆಲ್ಲರಿ ಶಾಪ್ ನಡೆಸುತ್ತಿದ್ದಾನೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದಾಗ, ಶಂಕರ್ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ. ಅಲ್ಲದೆ ಅವನು ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದಾಗಿ ಶಂಕರ್ ಕುಟುಂಬಸ್ಥರು ತಿಳಿಸಿದ್ದಾರೆ.
ಇತ್ತ ಸಿಎಂ ಮೇಲಿನ ದಾಳಿಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇತ್ತ ರಾಷ್ಟ್ರೀಯ ಜನತಾ ದಳ ಕೂಡ ದಾಳಿಯನ್ನು ಖಂಡಿಸಿದೆ.