ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಫಾಲೋ ಮಾಡಿಕೊಂಡು ಬಂದು, ಕೇವಲ ಒಂದು ಸಾವಿರ ಹಣಕ್ಕಾಗಿ ಕರುಳು ಆಚೆ ಬರುವ ಹಾಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಕಂದಕಟ್ಟೆಯ ವಿಘ್ನೇಶ್ವರ ನಗರದ ಶಿವಣ್ಣ ಎಂಬ ವೃದ್ಧ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಕೃಷ್ಣ ಹಾಗೂ ನಿರಂಜನ್ ಬಂಧಿತ ಆರೋಪಿಗಳು. ಒಬ್ಬರೇ ಬರೋದನ್ನೆ ಹೊಂಚುಹಾಕಿ ಕೂತಿದ್ದ ಆಸಾಮಿಗಳಾದ ಕೃಷ್ಣ ಮತ್ತು ನಿರಂಜನ್ ಫಾಲೋ ಮಾಡಿದ್ದರು. ನಿರಂಜನ್ ದೂರದಲ್ಲಿ ನಿಂತಿದ್ದರೇ ಕೃಷ್ಣ ಮಾತ್ರ ವೃದ್ಧ ಶಿವಣ್ಣನ ಜೊತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದ.
Advertisement
Advertisement
ಶಿವಣ್ಣನ ಬಳಿ ಕೃಷ್ಣ ಬಂದು ಪದೇ ಪದೇ ವಿಳಾಸ ಕೇಳುತ್ತಿದ್ದ. ಇದರಿಂದಾಗಿ ಆ ಶಿವಣ್ಣ ಕೂಡ ಊರಿಗೆ ಹೊಸಬ ಇರಬಹುದು ಎಂದು ಹೇಳಿ ವಿಳಾಸ ಹೇಳಿದ್ದಾನೆ. ಇದಾದ ಬಳಿಕ ಸುತ್ತಮುತ್ತ ಜನ ಇಲ್ಲದ್ದನ್ನು ನೋಡಿದ ಆತ ಶಿವಣ್ಣನ ಹೊಟ್ಟೆಗೆ ಚಾಕುವಿನಿಂದ ಇರಿದ್ದಿದ್ದಾನೆ. ಅದಾದ ಬಳಿಕ ಶಿವಣ್ಣನ ಜೇಬಿನಲ್ಲಿದ್ದ 1 ಸಾವಿರ ರೂ. ಹಣವನ್ನು ಕಸಿದು ಪರಾರಿಯಾಗಿದ್ದಾನೆ. ಚಾಕು ಇರಿದ ರಭಸಕ್ಕೆ ಹೊಟ್ಟೆಯಲ್ಲಿದ್ದ ಕರುಳೇ ಹೊರಬಂದಿತ್ತು. ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
Advertisement
ಘಟನೆ ವೇಳೆ ದುರಾದೃಷ್ಟಕ್ಕೆ ಏರಿಯಾದಲ್ಲಿ ಕರೆಂಟ್ ಹೋಗಿತ್ತು. ಅಷ್ಟೇ ಅಲ್ಲದೇ ವೃದ್ಧ ಬೆಳಗ್ಗೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ರೆ ಸಂಜೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಸದ್ಯ ಆಸ್ಪತ್ರೆ ಖರ್ಚು 3 ಲಕ್ಷ ಆಗಿದ್ದು, ಪರದಾಡುತ್ತಿದ್ದಾರೆ. ಇದನ್ನೂ ಓದಿ: 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಜೀನ್ಸ್ – ಜೈಲಿನಲ್ಲಿ ಸುಕೇಶ್ ಐಷಾರಾಮಿ ಜೀವನ
Advertisement
ಒಂದು ವಾರ ನಿರಂತರ ಪರಿಶ್ರಮದಿಂದಾಗಿ ಕೃಷ್ಣ ಹಾಗೂ ನಿರಂಜನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಕಳ್ಳತನ ಮಾಡಿದ್ದ 3 ದ್ವಿಚಕ್ರ ವಾಹನ, ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಅನುದಾನಿತ ಕಾಲೇಜು ಉಪನ್ಯಾಸಕರಿಗೆ NPS ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ: ಬೊಮ್ಮಾಯಿ
ಆರೋಪಿಗಳು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಡಘಟ್ಟ ಗ್ರಾಮದವರು. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವರು ಕಳ್ಳತನವನ್ನು ಕಾಯಕ ಮಾಡಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಾರ್‌ನಲ್ಲಿ ಕೆಲಸ ಬಿಟ್ಟಿದ್ದರು. ಹಾಗಾಗಿ ಖರ್ಚಿಗೂ ಕಾಸಿಲ್ಲದೇ ರಾಬರಿಗೆ ಇಳಿದಿದ್ದರು ಎನ್ನುವುದು ತಿಳಿದುಬಂದಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k