ಬೆಂಗಳೂರು: ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ (Electricity Bill) ಕಂಡು ವ್ಯಕ್ತಿಯೊಬ್ಬರು ಶಾಕ್ ಆದ ಘಟನೆ ಬೆಂಗಳೂರಿನ (Bengaluru) ಜೆಬಿ ಕಾವಲ್‌ನಲ್ಲಿ ನಡೆದಿದೆ.
ಜೆಬಿ ಕಾವಲ್‌ನ (JB Kaval) ಕೃಷ್ಣಾನಂದ ನಗರ ಪೊಲೀಸ್ ಕ್ವಾಟ್ರಸ್ ಮನೆಯೊಂದಕ್ಕೆ ಬರೋಬ್ಬರಿ 7 ಕೋಟಿ ರೂ. ಕರೆಂಟ್ ಬಿಲ್ ಬಂದಿದ್ದು, ಬಿಲ್ ಕಂಡು ನಿವಾಸಿಗಳು ದಂಗಾಗಿದ್ದಾರೆ. 17 ಕೋಟಿ ಬಿಲ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಇಷ್ಟೊಂದು ವಿದ್ಯುತ್ ಬಿಲ್ ಬರೋಕೆ ಹೇಗೆ ಸಾಧ್ಯ? ಅಷ್ಟು ಬಳಸಿಲ್ಲ ಎಂದು ನಿವಾಸಿಗಳು ವಾದಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ಜಾರ್ಖಂಡ್‌ನ ಕಾಂಗ್ರೆಸ್ ಸಚಿವ ಅಲಂಗೀರ್ ಆಲಂ ಬಂಧನ!
Advertisement
Advertisement
ಮೇ 5 ರಂದು ಕರೆಂಟ್ ಬಿಲ್ ವಿತರಣೆ ಆಗಿದೆ. ಒಟ್ಟು 17,15,75596 ಕರೆಂಟ್ ಬಿಲ್ ಬಂದಿದೆ. ಇದು ಬೆಸ್ಕಾಂ (BESCOM) ಮೀಟರ್ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಸರಿನಾ ಎಂದು ಬೆಸ್ಕಾಂ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಸದ್ಯ ಈ ವಿದ್ಯುತ್ ಬಿಲ್ ಭಾರೀ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಇದನ್ನೂ ಓದಿ: ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
Advertisement