ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

Public TV
1 Min Read
hyderabad man collage

ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಕೈಯಾರೆ ದಿನಕ್ಕೆ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ವಿಶ್ವ ದಾಖಲೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ಸರ್ಕಾರೇತರ ಸಂಸ್ಥೆ “ಸರ್ವ್ ನೀಡಿ” ಸ್ಥಾಪಕ ಗೌತಮ್ ಕುಮಾರ್ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

ಗೌತಮ್ ಭಾನುವಾರ ಮೂರು ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದಾರೆ. ಗೌತಮ್ ಮೊದಲು ಗಾಂಧಿ ಆಸ್ಪತ್ರೆ, ರಾಜೇಂದ್ರ ನಗರ ಹಾಗೂ ಚೌತುಪಾಲ್‍ನ ಅಮ್ಮ-ನಾನಾ ವೃದ್ಧಶ್ರಮದಲ್ಲಿ ಇದ್ದ ಜನರಿಗೆ ಊಟ ಮಾಡಿಸಿದ್ದಾರೆ. ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕೆ.ವಿ ರಮಣ ರಾವ್ ಹಾಗೂ ತೆಲಂಗಾಣವನ್ನು ಪ್ರತಿನಿಧಿಸುವ ಟಿ.ಎಂ ಶ್ರೀಲತಾ ಅವರು ಗೌತಮ್ ಕುಮಾರ್ ಅವರಿಗೆ ಈ ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ.

world record

ನಾನು ಸರ್ವ್ ನೀಡಿ ಸಂಸ್ಥೆಯನ್ನು 2014ರಲ್ಲಿ ಶುರು ಮಾಡಿದೆ. ಈಗ ಈ ಸಂಸ್ಥೆಯಲ್ಲಿ 140ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. 2014ರಿಂದ ನಾವು ಈ ರೀತಿಯ ಸಮಾಜ ಸೇವೆ ಕೆಲಸಗಳು ಮಾಡುತ್ತಿದ್ದೇವೆ. ಆದರೆ ಈಗ ನಾನು 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದೇನೆ. ಹಾಗಾಗಿ ಇದು ವಿಶ್ವ ದಾಖಲೆ ಆಗಿದೆ. “ಯಾರೂ ಅನಾಥರಂತೆ ಸಾಯಬಾರದು, ಯಾರು ಕೂಡ ಹಸಿವಿನಿಂದ ಸಾಯಬಾರದು” ಇದು ನನ್ನ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *