ಜೈಪುರ: ಇಎಂಐ (EMI) ಕಟ್ಟು ಎಂದು ಹೇಳಿದ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯನ್ನು (Hot Oil) ಎರಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ (Rajasthan) ಜುಂಜುನು ಎಂಬಲ್ಲಿ ನಡೆದಿದೆ. ದಾಳಿಗೊಳಗಾದ ಇಬ್ಬರು ಉದ್ಯೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರದಿಗಳ ಪ್ರಕಾರ ಜುಂಜುನುವಿನ ರಾಝಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ಬಳಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ಸುರೇಂದ್ರ ಸ್ವಾಮಿ ಫೈನಾನ್ಸ್ ಕಂಪನಿಯಲ್ಲಿ ವೈಯಕ್ತಿಕ ಸಾಲ (Loan) ಪಡೆದಿದ್ದು, ಇಎಂಐ ವಸೂಲಿಗಾಗಿ ಬಂದಿದ್ದ ಇಬ್ಬರು ನೌಕರರು ಕುಲದೀಪ್ ಹಾಗೂ ನವೀನ್ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ.
Advertisement
Advertisement
ಆರೋಪಿಯು ವಾರ್ಡ್ ನಂ.44ರ ಖೈತಾನ್ ಕಾ ಮೊಹಲ್ಲಾದ ನಿವಾಸಿಯಾಗಿದ್ದು, ಕುಲದೀಪ್ ಮತ್ತು ನವೀನ್ ಇಬ್ಬರೂ ಇಎಂಐ ಕೇಳಲು ಸ್ವಾಮಿ ಮನೆಗೆ ಬಂದಿದ್ದರು. ಆದರೆ ಸ್ವಾಮಿ ಅವರನ್ನು ರಾಣಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಬಳಿ ಭೇಟಿಯಾಗುವಂತೆ ಕರೆದಿದ್ದಾನೆ. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ
Advertisement
ಸ್ವಾಮಿ ಅವರನ್ನು ಭೇಟಿಯಾದ ಬಳಿಕ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ವೇಳೆ ಸಿಟ್ಟಾದ ಸ್ವಾಮಿ ಹತ್ತಿರದ ಅಂಗಡಿಯ ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಜಗ್‌ನಲ್ಲಿ ತೆಗೆದುಕೊಂಡು ಅವರಿಬ್ಬರ ಮೇಲೆ ಎರಚಿದ್ದಾನೆ. ಬಳಿಕ ಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ದಾಳಿಯಿಂದಾಗಿ ತೀವ್ರವಾದ ಸುಟ್ಟ ಗಾಯಗಳಾಗಿ ಉದ್ಯೋಗಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಘಟನೆಯ ಬಳಿಕ ಆರೋಪಿ ಸುರೇಂದ್ರ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಕುಲದೀಪ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನವೀನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊತ್ವಾಲಿ ಪೊಲೀಸರು ಸುರೇಂದ್ರ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ