ತುಮಕೂರು: ಅನೈತಿಕ ಸಂಬಂಧವಿದೆ (Illicit Relationship) ಎಂದು ಅನುಮಾನಗೊಂಡ ಪತಿಯೊಬ್ಬ (Husband) ಸಿಟ್ಟಾಗಿ ಪತ್ನಿ (Wife) ಮತ್ತು ಮೂವರು ಮಕ್ಕಳ ಮೇಲೆ ಬೆಂಕಿ ಹಚ್ಚಿದ ಘಟನೆ ಮಧುಗಿರಿ ತಾಲ್ಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಅವರ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿ ರೂಮಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ರಾಮಾಂಜನಪ್ಪ ಕೃತ್ಯ ಎಸಗಿದ್ದು ಪತ್ನಿ ಶಾಂತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾರ್ಚ್ 14ರಿಂದಲೇ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಶುರು
ಅಕ್ಷಯ(18) ಅಕ್ಷತಾ(13) ಅಮೃತಾ(10) ಗಾಯಗೊಂಡ ಹೆಣ್ಣುಮಕ್ಕಳು. ಮೂವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರಗೆ (Tumakuru District Hospital) ದಾಖಲಿಸಲಾಗಿತ್ತು. ಈ ಪೈಕಿ ಗಂಭೀರ ಗಾಯಗೊಂಡ ಒಬ್ಬಳನ್ನು ಬೆಂಗಳೂರಿನ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.