ಆನೇಕಲ್: ಸಂಬಂಧದಲ್ಲಿ ಸೋದರನಾಗಿರುವವರ ಜೊತೆ ಕಾಮದಾಟವಾಡುತ್ತಿದ್ದ ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಘಟನೆ ನಡೆದಿದೆ.
ಮುನಿಕೃಷ್ಣ (35) ನೇಣಿಗೆ ಶರಣಾದ ವ್ಯಕ್ತಿ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. 10 ವರ್ಷಗಳ ಹಿಂದೆ ನಯನ ಎಂಬುವವರನ್ನು ಮುನಿಕೃಷ್ಣ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಒಬ್ಬ ಗಂಡು ಮಗ ಇದ್ದಾನೆ. ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿದ್ದಾಗ ಮುನಿಕೃಷ್ಣನ ಸಂಬಂಧಿ ಕುಮಾರ ಎಂಬಾತ ಹುಳಿ ಹಿಂಡಿದ್ದ. ಇದನ್ನೂ ಓದಿ:SIR ಪ್ರ ತಿಭಟನೆ ನಡುವೆಯೇ ವಿಯೆಟ್ನಾಂಗೆ ಹಾರಿದ ರಾಹುಲ್ ಗಾಂಧಿ
ಕುಮಾರ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ನಯನಾಳನ್ನು ಕೆಲಸಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಸಂಬಂಧದಲ್ಲಿ ತಮ್ಮನಾಗಿರೋದ್ರಿಂದ ಯಾರು ಪ್ರಶ್ನೆ ಮಾಡಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಮುನಿಕೃಷ್ಣನ ಪತ್ನಿ ನಯನ ಜೊತೆ ಕುಮಾರ ಲವ್ವಿಡವ್ವಿ ನಡೆಸುತ್ತಿದ್ದ. ಮುನಿಕೃಷ್ಣ ಆಟೋ ತೆಗೆದುಕೊಂಡು ಹೋಗುತ್ತಿದ್ದಂತೆ ಕುಮಾರ ಮನೆಗೆ ಎಂಟ್ರಿ ಕೊಡುತ್ತಿದ್ದ.
ಕಳೆದ ಮೂರು ತಿಂಗಳ ಹಿಂದೆ ನಯನ ಹಾಗೂ ಕುಮಾರನ ಸಂಬಂಧ ಬಯಲಾಗಿತ್ತು. ಮುನಿಕೃಷ್ಣನಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದ ಕುಮಾರ, ಇಬ್ಬರು ಜೊತೆಗಿರುವ ಫೋಟೋ, ಅಸಭ್ಯ ವಿಡಿಯೋಗಳನ್ನ ಕಳಿಸಿದ್ದ. ಜೊತೆಗೆ ಇಬ್ಬರು ವಾಟ್ಸಾಪ್ ಚಾಟ್ ಮಾಡಿಕೊಂಡಿರೋದನ್ನ ಕಳುಹಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮುನಿಕೃಷ್ಣ ಹಾಗೂ ನಯನ ನಡುವೆ ಗಲಾಟೆಯಾಗಿತ್ತು. ಬಳಿಕ ನಯನ ತವರು ಮನೆ ಸೇರಿದ್ದಳು.ಇದನ್ನೂ ಓದಿ: ರಾಬಕೊವಿ ಹಾಲು ಒಕ್ಕೂಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಸಂಬಂಧಿಗಳ ಅಕೌಂಟ್ಳಿಗೆ ವರ್ಗಾವಣೆ ಮಾಡಿ ಹಣ ಲೂಟಿ
ಇತ್ತ ಕುಮಾರ ಮುನಿಕೃಷ್ಣನಿಗೆ ಟಾರ್ಚರ್ ಕೊಡಲು ಮುಂದಾಗಿದ್ದ. ರಸ್ತೆಯಲ್ಲಿ ಓಡಾಡುವಾಗೆಲ್ಲ ಸುಮ್ಮನೇ ನಿಂದಿಸುತ್ತಿದ್ದ. ಅಲ್ಲದೇ ನಯನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು ಎಂದಿದ್ದ. ಈ ವಿಷಯದಿಂದ ಮುನಿಕೃಷ್ಣ ಸಾಕಷ್ಟು ಮನನೊಂದಿದ್ದ, ಆದರೆ ಈ ವಿಚಾರ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಗೊತ್ತಿರಲಿಲ್ಲ.
ಸಾಯುವುದಕ್ಕೂ ಒಂದು ದಿನ ಮುನ್ನ ಮುನಿಕೃಷ್ಣ ತನ್ನ ಸಹೋದರನಿಗೆ ಈ ವಿಷಯವನ್ನು ತಿಳಿಸಿದ್ದ. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆರಂಭದಲ್ಲಿ ಕೌಟುಂಬಿಕ ಕಲಹದಿಂದ ಸಾವನ್ನಪ್ಪಿರಬೇಕೆಂದು ಕುಟುಂಬಸ್ಥರು ಅಂದುಕೊಂಡಿದ್ದರು. ಅಂತ್ಯಕ್ರಿಯೆ ನಡೆಸಿದ ಬಳಿಕ ಮುನಿಕೃಷ್ಣ ಹೇಳಿದ ವಿಷಯವನ್ನ ಸಹೋದರ ಕುಟುಂಬಸ್ಥರಿಗೆ ತಿಳಿಸಿದ್ದ. ಇದರಿಂದ ಅನೈತಿಕ ಸಂಬಂಧಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರೋದು ಗೊತ್ತಾಗಿದೆ.ಇದನ್ನೂ ಓದಿ :ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಕಠಿಣ ಕ್ರಮಕ್ಕೆ ಸೂಚಿಸಿದ ಸಿಎಂ ಫಡ್ನವೀಸ್
ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಯನ ಹಾಗೂ ಕುಮಾರನ ಅನೈತಿಕ ಸಂಬಂಧ ಮತ್ತು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾವಿಗೆ ಕಾರಣರಾದ ನಯನ ಹಾಗೂ ಕುಮಾರನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.ಇದನ್ನೂ ಓದಿ:90 ದಿನಗಳ ಮುಂಚೆಯೇ ಪಾಸ್ಗೆ ಅರ್ಜಿ ಸಲ್ಲಿಸಿ – ಅಯೋಧ್ಯೆ ಬಾಲ ರಾಮನ ದರ್ಶನಕ್ಕೆ ಹೊಸ ರೂಲ್ಸ್!
