ಚೆನ್ನೈ: ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ನೀಡಲು ಬಂದಾಗ ವ್ಯಕ್ತಿಯೊಬ್ಬ ಅವರಿಂದ ತಪ್ಪಿಸಿಕೊಳ್ಳಲು ಚಾಕು ಹಿಡಿದು ಮರ ಏರಿ ಕುಳಿತ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ ನಡೆದಿದೆ.
ಪುದುಚೇರಿಯ ವಿಲಿಯನೂರ್ ಗ್ರಾಮದ ಮಧ್ಯವಯಸ್ಕ ನಿವಾಸಿಯೊಬ್ಬ ಕೋವಿಡ್ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಅವರನ್ನು ಕಂಡ ತಕ್ಷಣ ಮರ ಏರಿ ಕುಳಿತಿದ್ದಾನೆ. ಲಸಿಕೆಯನ್ನು ಪಡೆಯಲು ಇಷ್ಟವಿರದ ವ್ಯಕ್ತಿ ಚಾಕುವಿನಿಂದ ಕೊಂಬೆಯನ್ನು ಕತ್ತರಿಸಲು ಪ್ರಾರಂಭಿಸಿದ್ದನು. ಇದನ್ನೂ ಓದಿ: ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು
ವ್ಯಕ್ತಿಗೆ ಲಸಿಕೆ ಪಡೆಯಲು ಇಷ್ಟವಿಲ್ಲದಿದ್ದರಿಂದ ಆರೋಗ್ಯ ಕಾರ್ಯಕರ್ತರಿಗೆ ಮರ ಏರಿ ಲಸಿಕೆ ಹಾಕುವಂತೆ ಸವಾಲು ಹಾಕಿದ್ದಾನೆ. ಆದರೆ ಕಾರ್ಯಕರ್ತರು ಆತನನ್ನು ಹಿಂಬಾಲಿಸಿಯೂ ಕೈಗೆ ಸಿಗದಿದ್ದಾಗ ಆ ಸ್ಥಳ ತೊರೆದು ಮುಂದಿನ ಕೆಲಸಕ್ಕೆ ಗಮನ ಹರಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಯ ಭಾಗವಾಗಿ ಪುದುಚೇರಿಯ ಜನರಿಗೆ ಶೇ. 100 ರಷ್ಟು ಲಸಿಕೆಗಳನ್ನು ಹಾಕಿಸುವ ಪ್ರಯತ್ನದಲ್ಲಿದೆ. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ 25 ರೂ. ಇಳಿಕೆ – ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಆಫರ್!