LatestLeading NewsMain PostNational

ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ 25 ರೂ. ಇಳಿಕೆ – ದ್ವಿಚಕ್ರ ವಾಹನಗಳಿಗೆ ಮಾತ್ರ ಈ ಆಫರ್!

Advertisements

ರಾಂಚಿ: ಜಾರ್ಖಂಡ್‍ನಲ್ಲಿ ಪೆಟ್ರೋಲ್ ದರ ದಾಖಲೆಯ ಲೀಟರ್‌ಗೆ 25 ರೂ. ಇಳಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಸೋರೇನ್ ಘೋಷಣೆ ಮಾಡಿದ್ದಾರೆ.

ಜಾರ್ಖಂಡ್‍ನ ಕಾಂಗ್ರೆಸ್ ಮತ್ತು ಜೆಎಮ್‍ಎಮ್ ಮೈತ್ರಿ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ಪೆಟ್ರೋಲ್ ಬೆಲೆ ಜನವರಿ 26 ರಿಂದ 25 ರೂ. ಕಡಿತ ಗೊಳಿಸುವುದಾಗಿ ಹೇಮಂತ್ ಸೋರೇನ್ ತಿಳಿಸಿದ್ದು, ಆದರೆ ಈ ರಿಯಾಯಿತಿ ಕೇವಲ ದ್ವಿಚಕ್ರ ಚಾಹನಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ 70 ರೂ.ಗೆ ಮದ್ಯ: ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷ

ಜಾರ್ಖಂಡ್‍ ಸರ್ಕಾರದ ಪ್ರಕಾರ, ಬೈಕ್ ಮತ್ತು ಸ್ಕೂಟರ್ ಹೊಂದಿರುವ ಬಿಪಿಎಲ್ ಕಾರ್ಡ್(BPL) ಫಲಾನುಭವಿಗಳು ಮಾತ್ರ ಈ ವಿನಾಯಿತಿ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಸಬ್ಸಿಡಿ ದರದಲ್ಲಿ ತಿಂಗಳಿಗೆ ಗರಿಷ್ಠ 10 ಲೀಟರ್ ಪೆಟ್ರೋಲ್ ಪಡೆಯಬಹುದು. ಫಲಾನುಭವಿಗಳು ಪಡಿತರ ಚೀಟಿಯೊಂದಿಗೆ ಪೆಟ್ರೋಲ್ ಪಂಪ್‍ಗೆ ಹೋಗಬೇಕಾಗುತ್ತದೆ. ಅಲ್ಲಿ ಅವರು ಪೆಟ್ರೋಲ್‍ನ ಸಂಪೂರ್ಣ ಬೆಲೆಯನ್ನು ಪಾವತಿಸಬೇಕಾಗುತ್ತದೆ.ನಂತರ ಸರ್ಕಾರವು 10 ಲೀಟರ್ ಪೆಟ್ರೋಲ್ ಮೇಲೆ 250 ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸುತ್ತದೆ. 10 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಖರೀದಿದರೆ ಕಾರ್ಡ್‍ದಾರರು ಮಾರುಕಟ್ಟೆ ದರದಲ್ಲಿ ಅವರೇ ಹಣ ಪಾವತಿಸಬೇಕಾಗಿದೆ ಎಂಬ ಷರತ್ತು ಇದೆ.

ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬಡ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸರ್ಕಾರ ಪೆಟ್ರೋಲ್ ಬೆಲೆ ಇಳಿಕೆಗೆ ನಿರ್ಧಾರ ಮಾಡಿದ್ದು, ಪ್ರತಿ ಲೀಟರ್‌ಗೆ 25 ರೂ. ಇಳಿಕೆ ಮಾಡಲಾಗುತ್ತಿದೆ. ಇದು ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದು, 26 ಜನವರಿ 2022 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಟ್ಟಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

Leave a Reply

Your email address will not be published.

Back to top button