ಮೈಸೂರು: ಇಲ್ಲಿನ ಅನುಗನಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ.
ಸೂರ್ಯ ಕೊಲೆಯಾದ ವ್ಯಕ್ತಿ. ಮದುವೆಯಾಗಿದ್ದರು ಸೂರ್ಯ ಮತ್ತೊಬ್ಬಳ ಜೊತೆ ಸಂಬಂಧ ಹೊಂದಿದ್ದ. ಇದರಿಂದ ಬೇಸತ್ತು ಆತನ ಹೆಂಡತಿ ಹಾಗೂ ತಾಯಿ ಮನೆ ಬಿಟ್ಟು ಹೋಗಿದ್ದರು. ಇದನ್ನೂ ಓದಿ: ಗುಜರಾತ್ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ – ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ
ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಶ್ವೇತಾ ಅನ್ನುವವಳನ್ನ ಪರಿಚಯ ಮಾಡಿಕೊಂಡಿದ್ದ ಸೂರ್ಯ ಬಳಿಕ ಅವಳ ಜೊತೆಯೇ ಸಂಬಂಧದಲ್ಲಿದ್ದ. ಇಬ್ಬರೂ ಜೊತೆಗಿರುವ ಖಾಸಗಿ ಫೋಟೋಗಳನ್ನ ಸ್ಟೇಟಸ್ ಕೂಡ ಹಾಕಿದ್ದ. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಬಳಿಕ ಶ್ವೇತಾ ಹಣ ಆಸ್ತಿಗಾಗಿ ಪೀಡಿಸಿದ್ದಾಳೆ.
ಹಣಕ್ಕೆ ಪೀಡಿಸುತ್ತಿರುವ ವಿಚಾರವನ್ನ ಕುಟುಂಬಸ್ಥರಿಗೂ ಸೂರ್ಯ ತಿಳಿಸಿದ್ದ. ನಿನ್ನೆ ರಾತ್ರಿ ಕೂಡ ತೋಟದಲ್ಲಿ ಶ್ವೇತಾ ಹಾಗೂ ಸೂರ್ಯ ಇದ್ದರು ಎನ್ನಲಾಗಿದೆ. ಬೆಳಗಾಗುವಷ್ಟರಲ್ಲಿ ಸೂರ್ಯನ ಕೊಲೆಯಾಗಿದೆ. ರಾತ್ರಿ ಅವಳ ಜೊತೆಯಲ್ಲೇ ಇದ್ದು ಬೆಳಿಗ್ಗೆ ವಾಪಸ್ಸು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಹೀಗಾಗಿ ಕೊಲೆಯನ್ನ ಶ್ವೇತಾಳೆ ಮಾಡಿರಬಹುದು ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್? – ಅಕ್ರಮ ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಪೊಲೀಸರು
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.