‘ಗರುಡ ಗಮನ ವೃಷಭ ವಾಹನ’, ಟೋಬಿ (Toby) ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ ರಾಜ್ ಬಿ ಶೆಟ್ಟಿ ಮಲಯಾಳಂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಟರ್ಬೊ’ (Turbo) ಸಿನಿಮಾದಲ್ಲಿ ಸ್ಟಾರ್ ಹೀರೋ ಮಮ್ಮುಟ್ಟಿಗೆ (Mammootty) ರಾಜ್ ಬಿ ಶೆಟ್ಟಿ (Raj B Shetty) ವಿಲನ್ ಆಗಿ ಅಬ್ಬರಿಸಿದ್ದಾರೆ. ಇದನ್ನೂ ಓದಿ:ಅಪ್ಪ ಮಗಳ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್
ಈಗಾಗಲೇ ಈ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಮುಂದೆ ವಿಲನ್ ಆಗಿ ನಟಿಸಿದ್ದಾರೆ. ‘ವೆಟ್ರಿವೇಲ್ ಶಣ್ಮುಗಸುಂದರಂ’ ಎಂಬ ಪಾತ್ರಕ್ಕೆ ರಾಜ್ ಜೀವ ತುಂಬಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಖಡಕ್ ಆಗಿ ನಟಿಸಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಝಲಕ್ ನೋಡಿಯೇ ಅಭಿಮಾನಿಗಳಿಗೆ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
View this post on Instagram
ಈ ಚಿತ್ರದಲ್ಲಿ ನಟಿಸಿ, ನಿರ್ಮಾಣಕ್ಕೂ ಮಮ್ಮುಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರವನ್ನು ವೈಶಾಕ್ ನಿರ್ದೇಶನ ಮಾಡಿದ್ದಾರೆ. ಟರ್ಬೊ ಸಿನಿಮಾದಲ್ಲಿ ಸುನೀಲ್, ಕಬೀರ್ ಸಿಂಗ್, ಅಂಜನ ಜಯಪ್ರಕಾಶ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೇ ಮೇ 23ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ
ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣದ ಸಂಸ್ಥೆಯಾದ ‘ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ.