ನವದೆಹಲಿ: ಕಾಶ್ಮೀರದ ಬೈಸರನ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಕೊನೆಗೂ ಭಾರತ (India) ಪ್ರತೀಕಾರ ತೀರಿಸಿಕೊಂಡಿದೆ. ʻಆಪರೇಷನ್ ಸಿಂಧೂರʼ (Operation Sindoor) ಹೆಸರಿನಡಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದ 9 ಉಗ್ರ ತಾಣಗಳನ್ನ ಹೊಡೆದುರುಳಿಸಿದೆ. ಭಾರತ ಸೇನಾ ಕಾರ್ಯಾಚರಣೆ ಯಶಸ್ಸಿನ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಯಿತು.
#WATCH | Delhi | After the all-party meeting, Congress MP and Lok Sabha LoP Rahul Gandhi said, “We have extended our full support to the government. As Mallikarjun Kharge ji said, they (the government) said that there are a few things that we don’t want to discuss.” pic.twitter.com/MiFhaHoDLm
— ANI (@ANI) May 8, 2025
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರʼದಲ್ಲಿ 100 ಉಗ್ರರ ಹತ್ಯೆ – ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ
#WATCH | Centre holds all-party meeting to brief all political parties on #OperationSindoor pic.twitter.com/q96NZnhUY6
— ANI (@ANI) May 8, 2025
100 ಉಗ್ರರ ಹತ್ಯೆ:
ಸಭೆಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸೇನೆ ನಡೆಸಿದ ವಾಯುದಾಳಿಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಈ ಪರಿಸ್ಥಿತಿಯನ್ನು ಬೆಳೆಸಲು ನಾವು ಬಯಸುವುದಿಲ್ಲ. ಒಂದು ವೇಳೆ ಪಾಕಿಸ್ತಾನ ಕಿತಾಪತಿ ಮಾಡಿದ್ರೆ ಸಹ ಹಿಂದೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಮೃತಸರದತ್ತ ಹಾರಿದ ಪಾಕ್ ಕ್ಷಿಪಣಿ ಅರ್ಧದಲ್ಲೇ ಉಡೀಸ್
ಮೋದಿ ಗೈರು; ಖರ್ಗೆ ಅಸಮಾಧಾನ:
ಇನ್ನೂ ಆಪರೇಷನ್ ಸಿಂಧೂರ ಕುರಿತು ನಡೆದ ಮಹತ್ವದ ಸರ್ವಪಕ್ಷ ಸಭೆಗೆ ಮೋದಿ ಗೈರಾದ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿ, ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಪಹಲ್ಗಾಮ್ ಉಗ್ರರ ದಾಳಿ ಬಳಿಕ ನಡೆದ ಸರ್ವಪಕ್ಷ ಸಭೆಗೂ ಮೋದಿ ಗೈರಾಗಿದ್ದನ್ನು ನೆನಪಿಸಿದ್ರು.
ಇನ್ನೂ ಸಭೆಯ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ನಾವು ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ಆದ್ರೆ ಅವರು (ಕೇಂದ್ರ ಸರ್ಕಾರ) ನಾವು ಚರ್ಚಿಸಲು ಬಯಸದ ಕೆಲವು ವಿಷಯಗಳಿವೆ ಅಂತ ಹೇಳಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಉಗ್ರರ ನೆಲೆಗಳ ಮೇಲೆ ಬಿದ್ದ ಸೂಸೈಡ್ ಡ್ರೋನ್‌ಗಳು ತಯಾರಾಗಿದ್ದು ಬೆಂಗಳೂರಿನಲ್ಲಿ!