ಕಲಬುರಗಿ: ಮುಳುಗುವ ಹಡಗಿಗೆ ನಾವಿಕನಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಕಾಂಗ್ರೆಸ್ (Congress) ಪಕ್ಷ ನೇಮಕ ಮಾಡುವ ಮೂಲಕ ಅವರನ್ನು ಬಲಿ ಕಾ ಬಕ್ರಾ (ಹರಕೆಯ ಕುರಿ) ಮಾಡಿದ್ದಾರೆ ಎಂದು ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಲೇವಡಿ ಮಾಡಿದ್ದಾರೆ.
Advertisement
ಬಿಜೆಪಿ ಹಿಂದುಳಿದ ವರ್ಗಳ ವಿರಾಟ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ಕಾಂಗ್ರೆಸ್ ಉಳಿಸಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಮುಳುಗುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಹರಕೆಯ ಕುರಿ ಮಾಡಿದ್ದಾರೆ ಎಂದರು.
Advertisement
Advertisement
ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ ಎಂದು ಖುದ್ದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದುರ್ದೈವದ ಸಂಗತಿ ಎಂದರೆ, ಅವರೇ ಹರಕೆಯ ಕುರಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ Vs ಕುಮಾರಸ್ವಾಮಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ?
Advertisement
ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಡೀ ವಿಶ್ವವೇ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡು, ಗುಣಗಾನ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
1947ರಲ್ಲಿ ಅಖಂಡ ಭಾರತವನ್ನು ತುಂಡು ಮಾಡಿದ್ದು ಇದೇ ಕಾಂಗ್ರೆಸ್‌ನ ನೆಹರೂ. ಇಂದು ರಾಹುಲ್ ಬಾಬಾ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ತುಕಡೇ (ತುಂಡು) ಮಾಡಿದವರಿಂದಲೇ ಜೋಡೋ ಅಭಿಯಾನ ನಡೆದಿದೆ ಎಂದರು. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು