ನವದೆಹಲಿ: ಭಾರತದ ವಿರುದ್ಧವೇ ಚುನಾವಣೆಯಲ್ಲಿ ಅಭಿಯಾನ ನಡೆಸಿ ಭಾರತದ ಸೈನಿಕರನ್ನು ಹೊರ ಹಾಕಿದ್ದ ಮಾಲ್ಡೀವ್ಸ್ (Maldives ) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಮೂರು ದಿನಗಳ ಪ್ರವಾಸಕ್ಕಾಗಿ ಮುಂದಿನ ವಾರ ಭಾರತಕ್ಕೆ (India) ಆಗಮಿಸಲಿದ್ದಾರೆ. ಈ ಭೇಟಿಯ ವೇಳೆ ಬೆಂಗಳೂರಿಗೂ (Bengaluru) ಆಗಮಿಸಿ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಅಧಿಕಾರಕ್ಕೆ ಏರಿದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಅಧಿಕೃತ ಪ್ರವಾಸ ಇದಾಗಲಿದೆ. ಈ ಜೂನ್‌ನಲ್ಲಿ ಮೋದಿ (PM Narendra Modi) ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಮುಯಿಝು ಅವರು ಅತಿಥಿಯಾಗಿ ಆಗಮಿಸಿದ್ದರು. ಅ.7 ರಿಂದ 10 ರವರೆಗೆ ಮುಯಿಝು ಭಾರತದಲ್ಲಿ ಇರಲಿದ್ದು ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಪ್ರವಾಸದ ವೇಳೆ ಬೆಂಗಳೂರು, ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್ ಎಚ್ಚರಿಕೆ
Advertisement
Advertisement
ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಮೊದಲಿನಿಂದಲೂ ಉತ್ತಮವಾಗಿಯೇ ಇತ್ತು. ಹೀಗಾಗಿ ಯಾರೇ ಅಧಿಕಾರಕ್ಕೆ ಏರಿದರೂ ಮೊದಲು ಭಾರತಕ್ಕೆ ಬರುತ್ತಿದ್ದರು. ಆದರೆ ಮುಯಿಝು ಇಂಡಿಯಾ ಔಟ್ (India Out) ಅಭಿಯಾನ ನಡೆಸಿ ಅಧಿಕಾರಕ್ಕೆ ಏರಿದ್ದರು. ಹೀಗಾಗಿ ಮೊದಲು ಚೀನಾಗೆ (China) ಅಧಿಕೃತ ಭೇಟಿ ನೀಡಿದ್ದ ಮುಯಿಝು ಅವರು ನಂತರ ಟರ್ಕಿಗೆ ಭೇಟಿ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನೂ ಓದಿ: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್
Advertisement
ಭಾರತಕ್ಕೆ ಭೇಟಿ ಯಾಕೆ?
ಮಾಲ್ಡೀವ್ಸ್ ಮುಖ್ಯ ಅದಾಯ ಪ್ರವಾಸೋದ್ಯಮ. ಬಾಯ್ಕಾಟ್ ಮಾಲ್ಡೀವ್ಸ್ (BoycottMaldives) ಅಭಿಯಾನ ಯಶಸ್ವಿಯಾಗಿದ್ದು ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಕಳೆದ ವರ್ಷದವರೆಗೆ ಮೊದಲ ಸ್ಥಾನದಲ್ಲಿದ್ದ ಭಾರತ ಈಗ 6ನೇ ಸ್ಥಾನಕ್ಕೆ ಜಾರಿದೆ.
Advertisement
ಮಾಲ್ಡೀವ್ಸ್ ಆರ್ಥಿಕತೆ ಮೊದಲೇ ಸಮಸ್ಯೆ ಎದುರಿಸುತ್ತಿತ್ತು. ಈಗ ಭಾರತೀಯರು ಪ್ರವಾಸಕ್ಕೆ ಹಿಂದೆ ಸರಿಯುತ್ತಿರುವ ಕಾರಣ ಮತ್ತಷ್ಟು ಹದಗೆಟ್ಟಿದೆ. ಈಗ ಸಂಬಂಧ ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತಕ್ಕೆ ಮುಯಿಝು ಬರುತ್ತಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ
ಬೆಂಗಳೂರಿಗೆ ಯಾಕೆ?
ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನಲ್ಲಿ ವಿಶ್ವದ ಹಲವು ಕಂಪನಿಗಳ ಕಚೇರಿಗಳಿಗೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಆಗುತ್ತಿದೆ. ಮಾಲ್ಡೀವ್ಸ್‌ನಲ್ಲಿ ಹೂಡಿಕೆದಾರರನ್ನು ಸೆಳೆಯಲು ಉದ್ಯಮ ಸಭೆಯಲ್ಲಿ ಭಾಗಿಯಾಗಲು ಮುಯಿಝು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ.