ಮಾಲಿವುಡ್‌ನ ನಟಿ ಮತ್ತು ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ಅಂಬಿಕಾ ರಾವ್ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿ ಹೃದಯ ಸ್ತಂಭನದಿಂದ ನಿರ್ದೇಶಕಿ ಅಂಬಿಕಾ ನಿಧನರಾಗಿದ್ದಾರೆ.
`ಕುಂಬಳಂಗಿ ನೈಟ್ಸ್’ ಖ್ಯಾತಿಯ ಮಲಯಾಳಂ ನಟಿ ಕಮ್ ನಿರ್ದೇಶಕಿ ಅಂಬಿಕಾ ರಾವ್ ಸೋಮವಾರ (ಜೂ.27) ರಾತ್ರಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಸುಮಾರು 10.30ಕ್ಕೆ ನಟಿ ಅಂಬಿಕಾ ಕೊನೆಯುಸಿರೆಳೆದಿದ್ದಾರೆ.ಕೋವಿಡ್ ಒಳಗಾದ ನಂತರ ನಟಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆಯು ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್
Rest in peace Ambika Chechi. ???????? pic.twitter.com/WNVZ6oeyxb
— Prithviraj Sukumaran (@PrithviOfficial) June 27, 2022
2002ರಲ್ಲಿ `ಕೃಷ್ಣ ಗೋಪಾಲಕೃಷ್ಣ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಸಹಾಯಕ ನಿರ್ದೇಶಕಿಯಾಗಿ ಪ್ರವೇಶಿಸಿದ್ದರು. ಮಮ್ಮುಟಿ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಅಂಬಿಕಾ ಅಕಾಲಿಕ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಕೂಡ ನಟಿ ಸಾವಿಗೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
Live Tv