– ಇಂದಿನ ರಾಷ್ಟ್ರೀಯ ಹೀರೋ ಆಶಾದೇವಿ
ಬೆಂಗಳೂರು: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಯಾರಾದರೂ ಸಿನಿಮಾ ಮಾಡಿದರೆ ಹೇಳಿ ನಾನು ನಿರ್ಭಯಾ ತಾಯಿ ಪಾತ್ರವನ್ನು ಮಾಡುತ್ತೇನೆ ಎಂದು ಹಿರಿಯ ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇಂದು ನಿರ್ಭಯಾ ದೋಷಿಗಳಿಗೆ ಮರಣದಂಡನೆ ಆಗಿದೆ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು ಎಂದು ನಿರ್ಭಯಾ ತಾಯಿ ಆಶಾದೇವಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದರು. ಇದೀಗ ನಿರ್ಭಯಾ ತಾಯಿ ಮಾತಿಗೆ ನಟಿ ಮಾಳವಿಕಾ ಅವಿನಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?
Advertisement
Advertisement
ಮಾಳವಿಕಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಯಾರಾದರೂ ಸಿನಿಮಾ ಮಾಡುತ್ತಿದ್ದರೆ ಹೇಳಿ, ನಾನು ನಿರ್ಭಯಾ ತಾಯಿ ಆಶಾದೇವಿ ಪಾತ್ರ ಮಾಡುತ್ತೇನೆ. ಇಂದಿನ ರಾಷ್ಟ್ರೀಯ ಹೀರೋ ಅವರು. ಎಂತಹ ತಾಯಿ” ಎಂದು ಮಾಳವಿಕಾ ನಿರ್ಭಯಾ ತಾಯಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ: ವೈರಲ್ ಆಯ್ತು ಅಪರಾಧಿ ತಾಯಿಯ ವಿಡಿಯೋ
Advertisement
Asha Devi, mother of 2012 Delhi gang-rape victim: Our daughter is no more & won't return.We started this fight after she left us, this struggle was for her but we will continue this fight in future for our daughters. I hugged my daughter's picture & said 'finally you got justice' https://t.co/Bqv7RG8DtO pic.twitter.com/XBeAJYC8of
— ANI (@ANI) March 20, 2020
Advertisement
ನಿರ್ಭಯಾ ತಾಯಿ ಹೇಳಿದ್ದೇನು?
ಹಂತಕರಿಗೆ ಗಲ್ಲು ಆಗುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಆಶಾದೇವಿ, ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು. ಸರ್ಕಾರ, ರಾಷ್ಟ್ರಪತಿ ಮತ್ತು ದೇಶದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅಪರಾಧಿಗಳು ಪದೇ ಪದೇ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮೂರು ಬಾರಿ ಡೆತ್ ವಾರೆಂಟ್ ಮುಂದೂಡಿಕೆಯಾಗಿತ್ತು. ಹಾಗಾಗಿ ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿತ್ತು. ಇಂದು ಏಕಕಾಲದಲ್ಲಿ ನಾಲ್ವರಿಗೂ ಗಲ್ಲಿಗೆ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಿರ್ಭಯಾ ಪ್ರಕರಣ- 2012ರಿಂದ 2020ರವರೆಗೆ ಏನೇನಾಯ್ತು?
ನಿರ್ಭಯಾ ತಂದೆ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್, ಅಪರಾಧಿಗಳು ಕೊನೆಯವರೆಗೆ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ವಕೀಲರು ಕೂಡ ಪ್ರತಿ ಕ್ಷಣ, ಪ್ರತಿ ನಿಮಿಷ ಹೋರಾಡಿದ್ದಾರೆ. ನಾವು ಇದ್ದ ಕಡೆ ಅವರು ಇರುತ್ತಿದ್ದರು. ಆದರೆ ಕೊನೆಯದಾಗಿ ನಮಗೆ ಜಯವಾಯಿತು. ಏಕೆಂದರೆ ನಾವು ಸತ್ಯದ ಕಡೆ ಇದ್ದವು ಎಂದು ಪ್ರತಿಕ್ರಿಯಿಸಿದರು.
If someone is making a film, I offer my services to play #AshaDevi(GRATIS), our National hero today! What a mother ????????#NirbhayaRapistsHanged @BangaloreTimes1 @suvarnanewstv @publictvnews @tv9kannada @KannadaPrabha
— Malavika Avinash (@MalavikaBJP) March 20, 2020
2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್‍ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟಿನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟಿಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು. ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತ್ತು.