ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

Public TV
2 Min Read
malala

ವಾಷಿಂಗ್ಟನ್: 2012 ರಲ್ಲಿ ತಾಲಿಬಾನ್ ದಾಳಿಯಿಂದ ಬದುಕುಳಿದ ಮಾನವ ಹಕ್ಕುಗಳ ವಕೀಲೆ ಮಲಾಲಾ ಯೂಸುಫ್ ಝಾಯಿ ಅವರು ವಾಷಿಂಗ್ಟನ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರಿಗೆ ಯುಎಸ್ ಬೆಂಬಲ ನೀಡುವಂತೆ ವಾದಿಸಿದರು.

ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆ ಸೇರಿ ಅಫ್ಘಾನ್ ಹುಡುಗಿಯರು ಶಾಲೆಗಳಿಗೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿ ನೀಡುವಂತೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಲಾಲಾ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

Afghanistan school

ಮಲಾಲಾ ಅಫ್ಘಾನ್ ಹುಡುಗಿಯರಿಗೆ ಆಗುತ್ತಿರುವ ಅನ್ಯಾಯ ಕುರಿತು ವಿದೇಶಾಂಗ ಕಾರ್ಯದರ್ಶಿಗೆ ವಿವರಿಸುತ್ತ, ಅಫ್ಘಾನಿಸ್ತಾನ ಈಗ ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವಿಲ್ಲದ ಏಕೈಕ ದೇಶವಾಗಿದೆ. ಹುಡುಗಿಯರು ಶಿಕ್ಷಣ ಕಲಿಯುವುದನ್ನೆ ಅವರು ನಿಷೇಧಿಸಲಾಗಿದೆ ಎಂದು ಅಫ್ಘಾನ್ ಹುಡುಗಿಯವರ ದುಃಖವನ್ನು ತಿಳಿಸಿದರು. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

ಅಲ್ಲದೇ ಈ ಕುರಿತು 15 ವರ್ಷದ ಸೊಟೊಡಾಹ್ ಎನ್ನುವ ಅಫ್ಘಾನ್ ಹುಡುಗಿ, ಎಲ್ಲ ಹುಡುಗಿಯರು ಸುರಕ್ಷಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಜಗತ್ತನ್ನು ನಾವು ನೋಡಲು ಬಯಸುತ್ತೇವೆ ಎಂದು ಅಧ್ಯಕ್ಷ ಜೋ ಬಿಡೆನ್ ಅವರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದು, ಸಭೆಯಲ್ಲಿ ಆ ಪತ್ರ ಕುರಿತು ಮಲಾಲಾ ಅವರು ಪ್ರಸ್ತುತಪಡಿಸಿದರು.

afghan women 1

ಸೊಟೊಡಾಹ್ ತನ್ನ ಪತ್ರದಲ್ಲಿ, ಹೆಚ್ಚು ಕಾಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಹುಡುಗಿಯರಿಗೆ ಮುಚ್ಚಲ್ಪಟ್ಟಿದ್ದು, ಇದು ಅವರ ಭವಿಷ್ಯಕ್ಕೆ ಮಾರಕವಾಗಿರುತ್ತೆ. ಬಾಲಕಿಯರ ಶಿಕ್ಷಣವು ಶಾಂತಿ ಮತ್ತು ಭದ್ರತೆಯನ್ನು ತರಲು ಪ್ರಬಲ ಸಾಧನವಾಗಿದೆ ಎಂದು ಆ ಹುಡುಗಿ ಬರೆದಿರುವ ಪತ್ರದ ಸಾರವನ್ನು ಮಲಾಲಾ ವಿವರಿಸಿದರು.

ಹೆಣ್ಣುಮಕ್ಕಳು ಕಲಿಯದಿದ್ದರೆ, ಅಫ್ಘಾನಿಸ್ತಾನವೂ ಸಹ ಬಳಲುತ್ತದೆ. ಅವಳ ಕೆಲಸದಿಂದ, ಅವರ ಪ್ರಯತ್ನಗಳಿಂದ, ನಿಜವಾದ ಬದಲಾವಣೆಯನ್ನು ಮಾಡಲು ಸಾಧ್ಯ ಎಂದು ವಾದಿಸಿದರು. ಇದನ್ನೂ ಓದಿ: ಸೈಬರ್ ವಂಚನೆ ಮಾಡಿದ್ದ ಇಬ್ಬರ ಬಂಧನ

malala 1

ತಾಲಿಬಾನ್ ಅಧಿಕಾರವನ್ನು ಸ್ವೀಕರಿಸಿದ ನಂತರ ಅಫ್ಘಾನಿಸ್ತಾನದ ಮಾಧ್ಯಮಿಕ ಶಾಲೆಗಳು ಪುನಃ ತೆರೆಯಲ್ಪಟ್ಟಿದ್ದು, ಪುರುಷರಿಗೆ ಮಾತ್ರ ಕಲಿಸಲು ಅನುಮತಿ ಇದೆ. ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆಗೂಡಿ ಹುಡುಗಿಯರ ಶಿಕ್ಷಣಕ್ಕೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿಸುವುದನ್ನು ನೀಡುವಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಭಾವಿಸುತ್ತೇವೆ ಎಂದು ಮಲಾಲಾ ಅವರು ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

Share This Article
Leave a Comment

Leave a Reply

Your email address will not be published. Required fields are marked *