ಮುಂಬೈ: ಬಾಲಿವುಡ್ ನಟಿ ಹಾಗೂ ಡ್ಯಾನ್ಸರ್ ಮಲೈಕಾ ಅರೋರಾ ಇಂದು ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡರು.
ಮುಂಬೈನ ಬಂದ್ರದಲ್ಲಿರುವ ಅಂಗಡಿಯಿಂದ ಕೆಲವು ಪದಾರ್ಥ ಖರೀದಿಸಿ ಬರುವ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಮಲೈಕಾ ಅರೋರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡರು. ಇದನ್ನೂ ಓದಿ: ಶರ್ಟ್ ಧರಿಸಿ ಪ್ಯಾಂಟ್ ಹಾಕದೆ ಮನೆಯಿಂದ ಹೊರ ಬಂದ ಮಲೈಕಾ
ಬ್ಲಾಕ್ ಕಲರ್ ಜಿಮ್ ಡ್ರೆಸ್‍ನಲ್ಲಿ ಕಾಣಿಸಿಕೊಂಡ ಮಲೈಕಾ ಬಿಳಿ ಬಿಣ್ಣದ ಹ್ಯಾಂಡ್ ಕವರ್ ಹಿಡಿದುಕೊಂಡು ಅಂಗಡಿಯಿಂದ ಹೊರಗೆ ಬಂದರು. ಈ ವೇಳೆ ಮಲೈಕಾ ಒಂದು ಕೈಯಲ್ಲಿ ಕವರ್ ಹಿಡಿದುಕೊಂಡಿದ್ದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ಫೋನ್ ಹಾಗೂ ಕೂಲಿಂಗ್ ಗ್ಲಾಸ್ ಹಿಡಿದುಕೊಂಡಿದ್ದರು. ಇದನ್ನೂ ಓದಿ: ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ
ಇದೇ ವೇಳೆ ಮಲೈಕಾ ಕ್ಯಾಮೆರಾಗೆ ಹಾಯ್ ಮಾಡಿ ಕಾರಿನ ಬಳಿ ತಮ್ಮ ಕೆಲಸಗಾರರೊಬ್ಬರ ಕೈಗೆ ಕವರ್‌ಗಳನ್ನು ನೀಡಿ, ಮತ್ತೊಮ್ಮೆ ಕ್ಯಾಮೆರಾಗೆ ಹಾಯ್ ಮಾಡಿ ಕಾರಿನೊಳಗೆ ಕುಳಿತುಕೊಂಡರು. ಇದನ್ನೂ ಓದಿ: ಪ್ರೀತಿಯಲ್ಲಿ ಎಲ್ಲರೂ ಎರಡನೇ ಅವಕಾಶಕ್ಕೆ ಅರ್ಹರು: ಮಲೈಕಾ
ಇತ್ತೀಚೆಗಷ್ಟೇ ಮಲೈಕಾ ಅರೋರಾ ಬಾತುಕೋಳಿಯಂತೆ ನಡೆಯುವ ಮೂಲಕ ಸಖತ್ ಸುದ್ದಿಯಾಗಿದ್ದರು. ಮಲೈಕಾ ಅವರ ಬಾತುಕೋಳಿ ನಡಿಗೆ ಕಂಡ ಅವರ ಅಭಿಮಾನಿಗಳಲ್ಲಿ ಕೆಲವರು ಮೆಚ್ಚುಕೊಂಡರೆ, ಇನ್ನು ಕೆಲವರು ಇಷ್ಟವಾಗಿಲ್ಲ. ಬಾತುಕೋಳಿ ನಡಿಗೆ ಎಂದು ನೆಟ್ಟಿಗರು ಕಾಲೆಳೆದಿದ್ದರು. ಮತ್ತೆ ಹಲವರು ಏಕೆ ಹಾಗೆ ನಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಮಲೈಕಾ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪುತ್ರ ನಟ ಅರ್ಜುನ್ ಜೊತೆಗೆ ಬಹಳ ಕಾಲದಿಂದ ರಿಲೇಶನ್ ಶಿಪ್‍ನಲ್ಲಿದ್ದಾರೆ. ಇದನ್ನೂ ಓದಿ: ಬಾತುಕೋಳಿಯಂತೆ ನಡೆದ ಮಲೈಕಾ- ಸಖತ್ ಹಾಟ್