Bollywood

ಬಾತುಕೋಳಿಯಂತೆ ನಡೆದ ಮಲೈಕಾ- ಸಖತ್ ಹಾಟ್

Published

on

Share this

ಮುಂಬೈ: ಬಾಲಿವುಡ್ ಸಿನಿಮಾ ಅಂಗಳದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ, ಡಾನ್ಸರ್ ಮಲೈಕಾ ಅರೋರಾ. ಇದೀಗ ಬಾತುಕೋಳಿಯಂತೆ ನಡೆದು ಸಖತ್ ಹಾಟ್ ಆಗಿ ಕಾಣಿಸಿಕೊಂಡು ಚರ್ಚೆಯ ಮೂಲವಾಗಿದ್ದಾರೆ.

47 ವರ್ಷದ ಮಲೈಕಾ ದಿನವೂ ಜಿಮ್‍ಗೆ ತೆರಳುವಾಗ ನೆರೆದಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ಪೋಸ್ ನೀಡಿದ್ದಾರೆ. ಅದರೊಂದಿಗೆ ವಿಚಿತ್ರವಾಗಿ ನಡೆದಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇದನ್ನೂ ಓದಿ:  ಕಟೌಟ್ ಡ್ರೆಸ್‍ನಲ್ಲಿ ನೋರಾ ಫತೇಹಿ ಸಖತ್ ಹಾಟ್

ಮಲೈಕಾ ಅವರ ಬಾತುಕೋಳಿ ನಡಿಗೆ ಕಂಡ ಅವರ ಅಭಿಮಾನಿಗಳಲ್ಲಿ ಕೆಲವರು ಮೆಚ್ಚುಕೊಂಡಿದ್ದಾರೆ, ಇನ್ನು ಕೆಲವರಿಗೆ ಇಷ್ಟವಾಗಿಲ್ಲ. ಬಾತುಕೋಳಿ ನಡಿಗೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಮತ್ತೆ ಹಲವರು ಏಕೆ ಹಾಗೆ ನಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಲೈಕಾ ಹಾಗೂ ನಟ ಅರ್ಜುನ್ ಬಹಳ ಕಾಲದಿಂದ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಇತ್ತೀಚೆಗಷ್ಟೇ ಗೆಳತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಕಪೂರ್, ನಾನು ದುಃಖದಲ್ಲಿದ್ದಾಗ, ಖುಷಿಯಲ್ಲಿದಾಗ ಯಾವುದೇ ಸಂದರ್ಭವಿರಲಿ ಅದು ಆಕೆಗೆ ತಿಳಿಯುತ್ತದೆ. ಒಂದು ವೇಳೆ ನಾನು ಕದ್ದು ಕುಳಿತರೂ ಅದು ಆಕೆಗೆ ತಿಳಿದಿರುತ್ತದೆ ಎಂದು ಮಲೈಕಾ ಕುರಿತು ಹೇಳಿದ್ದರು.

 

View this post on Instagram

 

A post shared by Bollywood Pap (@bollywoodpap)

ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿಟ್ಟಿಲ್ಲವಾದರೂ, ಇಬ್ಬರೂ ಜೊತೆಯಾಗಿಯೇ ಸುತ್ತಾಡುವುದನ್ನು ಒಪ್ಪಿಕೊಂಡಿದ್ದಾರೆ. ಬಾತುಕೋಳಿಯಂತೆ ನಡೆದ ಮಲೈಕಾ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Click to comment

Leave a Reply

Your email address will not be published. Required fields are marked *

Advertisement
Advertisement