ಭಾರತೀಯ ಸಾಂಪ್ರಾಯಿಕ ಹಬ್ಬಗಳೆಂದರೆ ಸಾಕು, ತಕ್ಷಣ ನೆನಪಾಗುವುದೇ ಆ ಹಬ್ಬದ ವಿಶೇಷ ತಿನಿಸು. ಒಬ್ಬಟ್ಟು ಪಾಯಸ, ನುಚ್ಚಿನುಂಡೆ, ಸುಕ್ಕಿನುಂಡೆ, ಕರ್ಜಿಕಾಯಿ, ಚಕ್ಕಲಿ, ನಿಪ್ಪಟ್ಟು, ಕೋಡುಬಳೆ ಹೀಗೆ ಪ್ರತಿ ಹಬ್ಬಗಳಿಗೂ ಒಂದಿಲ್ಲೊಂದು ತಿನಿಸುಗಳು ಇದ್ದೇ ಇರುತ್ತವೆ. ಹಳ್ಳಿಗಳಲ್ಲಿ ಒಂದೇ ಹಬ್ಬಕ್ಕೆ ಹತ್ತು ಹಲವು ತಿನಿಸುಗಳನ್ನು ಮಾಡುವುದು ಸಹಜವೇ ಆದರೂ, ಸಿಟಿ ಲೈಫು ಅನಿಭವಿಸುವವರಿಗೆ ಈ ರೀತಿಯ ತಿನಿಸುಗಳು ಸಿಗುವುದೇ ಅಪರೂಪ. ಹಾಗಾಗಿ ಈ ಬಾರಿಯ ಹೋಳಿ ಹಬ್ಬವು `ಮಲಾಯ್ ಗುಜಿ’ (ಹಾಲಿನ ಕರ್ಜಿಕಾಯಿ)ಯನ್ನು ಪರಿಚಯಿಸುತ್ತಿದೆ. ಇದು ಈ ಬಾರಿಯ ಹೋಳಿ ಹಬ್ಬದ ವಿಶೇಷ ತಿನಿಸು ಎಂದೇ ಹೇಳಲಾಗುತ್ತಿದೆ. ಹಾಗಿದ್ದರೆ ಈ ಬಗ್ಗೆ ತಿಳಿಯೋಣ ಬನ್ನಿ…..
Advertisement
ಬೇಕಾಗುವ ಸಾಮಗ್ರಿಗಳು:
* 2 ಕಪ್ ಹಾಲು
* 2 ಕಪ್ ಮೈದಾ
* 200 ಗ್ರಾಂ ಪುಡಿಮಾಡಿದ ಸಕ್ಕರೆ
* ಏಲಕ್ಕಿ ಪುಡಿ- ಅರ್ಧ ಚಮಚ
* ಗೋಡಂಬಿ ಹಾಗೂ ಡ್ರೈಫ್ರೂಟ್ಸ್- ಸ್ವಲ್ಪ
* ತೆಂಗಿನಕಾಯಿ ತುರಿ- ಅರ್ಧ ಕಪ್
Advertisement
ಮಾಡುವ ವಿಧಾನ:
* ಸಕ್ಕರೆಪುಡಿ ಬೆರಸಿದ ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಹಾಲು ಹದವಾಗಿ ಕಾದ ನಂತರ ತೆಂಗಿನ ಕಾಯಿ ತುರಿಯನ್ನು ಮಿಶ್ರಣ ಮಾಡಬೇಕು.
Advertisement
* ನಂತರ ತುಪ್ಪದಲ್ಲಿ ಉರಿದ ಡ್ರೈಫ್ರೂಟ್ಸ್‍ಗಳನ್ನು ಕಾಯಿಸಿದ ಹಾಲಿನೊಂದಿಗೆ ಬೆರೆಸಬೇಕು.
* ನಂತರ ಮೈದಾ ಹಿಟ್ಟನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಹದ ಮಾಡಿಕೊಳ್ಳಬೇಕು. ನಂತರ ತುಪ್ಪವನ್ನು ಲಘುವಾಗಿ ಮಿಶ್ರಣ ಮಾಡಿ, ಕಲಸಿದ ಹಿಟ್ಟಿನ ಮೇಲೆ ತುಪ್ಪದ ಅಂತಿಮ ಲೇಪನವನ್ನು ಹಾಕಿ. ಸ್ವಲ್ಪ ಸಮಯದವರೆಗೆ ನೆನೆಸಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
Advertisement
* ಹಿಟ್ಟನ್ನು ರೋಲ್ ಮಾಡಿ ಮತ್ತು ಸಮಾನ ಭಾಗಗಳಾಗಿ ಕತ್ತರಿಸಿ. ಪ್ರತಿ ಭಾಗವನ್ನು ಸಣ್ಣದಾಗಿ ಸುತ್ತಿಕೊಳ್ಳಬೇಕು. ಎಲ್ಲಾ ಬದಿಗಳಲ್ಲಿ ಮೈದಾಹಿಟ್ಟಿನಿಂದ ಸ್ಮೀಯರ್ ಮಾಡಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್
* ಹಾಲಿನ ಮಿಶ್ರಣವನ್ನು ಮಧ್ಯದಲ್ಲಿ ಇರಿಸಿ ಮತ್ತು ಕರ್ಜಿಕಾಯಿ ಆಕಾರವನ್ನು ನೀಡಲು ತುದಿಗಳನ್ನು ಭದ್ರಪಡಿಸಿ. ಒಂದು ಸಣ್ಣ ರಂಧ್ರವನ್ನು ಮಾಡಬೇಕು.
* ನಂತರ ತುಪ್ಪವನ್ನು ಬಿಸಿ ಮಾಡಿ, ಈಗಾಗಲೇ ತಯಾರಿಸಿದ ಕರ್ಜಿಕಾಯಿ ಹಾಕಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಕರ್ಜಿಕಾಯಿ ಸವಿಯಲು ಸಿದ್ಧ.